ವಾಷಿಂಗ್ಟನ್: ಫಿಜರ್-ಬಯೋಎನ್‌ಟೆಕ್ ಅಥವಾ ಮೊಡೆರ್ನಾ ಕೋವಿಡ್-19 ಲಸಿಕೆ ಪಡೆದ ಗರ್ಭಿಣಿಯರಿಂದ ನವಜಾತ ಶಿಶುಗಳಲ್ಲಿ ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯಗಳ ಬೆಳವಣಿಗೆ ಆಗಿದೆ ಎಂದು ಅಧ್ಯಯನ ವರದಿ ಹೇಳಿದೆ.
36 ನವಜಾತ ಶಿಶುಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬಹಿರಂಗವಾಗಿದೆ.
ನವಜಾತ ಮಗುವು ಗರ್ಭಾವಸ್ಥೆಯಲ್ಲಿದ್ದಾಗ ತಾಯಿಯು ಕೋವಿಡ್-19 ಲಸಿಕೆ ಪಡೆದಿದ್ದರು. ಇದರಿಂದ ಗರ್ಭಿಣಿ ಮಾತ್ರವಲ್ಲ, ಹುಟ್ಟಲಿರುವ ಮಗುವೂ ಸುರಕ್ಷಿತ ಎಂಬುದು ಅಧ್ಯಯನದಿಂದ ಸಾಬೀತಾಗಿದೆ.
ನೂತನ ಅಧ್ಯಯನ ವರದಿಯು ಹೆರಿಗೆ ಮತ್ತು ಗರ್ಭ ಶಾಸ್ತ್ರಕ್ಕೆ ಸಬಂಧಿಸಿದ 'ಅಮೆರಿಕನ್ ಜರ್ನಲ್ ಆಫ್ ಅಬ್ಸ್‌ಟೆಟ್ರಿಕ್ಸ್ ಆ್ಯಂಡ್ ಗೈನೆಕಾಲಜಿ ಎಂಎಫ್‌ಎಂ'ನಲ್ಲಿ ಪ್ರಕಟಗೊಂಡಿದೆ ಎಂದು ಎಎನ್‌ಐ ವರದಿ ಮಾಡಿದೆ.
ಪ್ರತಿಕಾಯಗಳನ್ನು ಉತ್ಪಾದಿಸಲು ಪ್ರಚೋದಿಸುವಂತಹ ಗುಣಲಕ್ಷಣಗಳು ಮತ್ತು ನಿರ್ದಿಷ್ಟ ಸೋಂಕಿನಿಂದ ರಕ್ಷಣೆ ನೀಡುವ ರಕ್ತದ ಪ್ರೋಟಿನ್‌ಗಳು ನವಜಾತ ಶಿಶುಗಳಲ್ಲಿ ಇರುವುದನ್ನು ಅಧ್ಯಯನದಲ್ಲಿ ಕಂಡುಕೊಂಡಿರುವುದಾಗಿ ಸಂಶೋಧಕರು ತಿಳಿಸಿದ್ದಾರೆ.
ಇಂತಹ ಸುರಕ್ಷತೆ ವ್ಯವಸ್ಥೆಯು ಮಗುವಿಗೆ, ಅದು ಗರ್ಭಾವಸ್ಥೆಯಲ್ಲಿದ್ದಾಗ ತಾಯಿಯಿಂದಲೇ ಬಂದಿದ್ದಾಗಿದೆಯೇ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಅಧ್ಯಯನದಲ್ಲಿ ಭಾಗಿಯಾದ 36 ನವಜಾತ ಶಿಶುಗಳ ತಾಯಂದಿರು ಗರ್ಭಿಣಿಯರಾಗಿದ್ದಾಗ ಫಿಜರ್-ಬಯೋಎನ್‌ಟೆಕ್ ಅಥವಾ ಮೊಡೆರ್ನಾ ಕೋವಿಡ್-19 ಲಸಿಕೆ ಪಡೆದಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.