ಬುಧವಾರ, ಅಕ್ಟೋಬರ್ 20, 2021
24 °C

ಅಫ್ಗಾನಿಸ್ತಾನದ ಮಸೀದಿ ಮೇಲಿನ ಆತ್ಮಾಹುತಿ ಬಾಂಬರ್ ದಾಳಿ 'ದೊಡ್ಡ ದುರಂತ': ಅಮೆರಿಕ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟಂನ್: ಉತ್ತರ ಅಫ್ಗಾನಿಸ್ತಾನದ ಕುಂದುಜ್‌ನಲ್ಲಿ ಶಿಯಾ ಮಸೀದಿ ಮೇಲೆ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 100ಕ್ಕೆ ಏರಿಕೆಯಾಗಿದ್ದು, ಇದು 'ದೊಡ್ಡ ದುರಂತ' ಮತ್ತು ಆ ದೇಶದ ಜನರು ಉತ್ತಮವಾದುದನ್ನು ಪಡೆಯಲು ಅರ್ಹರಾಗಿದ್ದಾರೆ' ಎಂದು ಅಮೆರಿಕ ಹೇಳಿದೆ.

'ಘಟನೆಯಲ್ಲಿ ಉಂಟಾಗಿರುವ ಯಾವುದೇ ನಷ್ಟವು ಕೂಡ ದೊಡ್ಡ ದುರಂತ. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗಾಗಿ ನಮ್ಮ ಹೃದಯವು ದುಃಖಿಸುತ್ತದೆ' ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ತನ್ನ ದೈನಂದಿನ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

'ಅಫ್ಗಾನಿಸ್ತಾನದಲ್ಲಿ ನಮ್ಮ ಪರವಾಗಿ ನಿಂತವರು ಆ ದೇಶದಿಂದ ಹೊರ ಬರಲು ಬಯಸಿದರೆ, ಅವರನ್ನು ಕರೆತರುವ ಕೆಲಸವನ್ನು ಆ ಭಾಗದ ನಾಯಕರ ಜೊತೆಗೂಡಿ ಖಂಡಿತಾ ಮುಂದುವರಿಸುತ್ತೇವೆ. ಇದು ನಿರಂತರ ಪ್ರಕ್ರಿಯೆಯಾಗಿದೆ' ಎಂದು ಸಾಕಿ ಹೇಳಿದ್ದಾರೆ.

ಪ್ರತ್ಯೇಕ ಹೇಳಿಕೆಯಲ್ಲಿ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್, 'ಉತ್ತರ ಅಫ್ಘಾನಿಸ್ತಾನದ ಮಸೀದಿಯಲ್ಲಿ ಶುಕ್ರವಾರ ನಡೆದ ದಾಳಿಯನ್ನು ಅಮೆರಿಕ ಅತ್ಯಂತ ಕಠಿಣವಾಗಿ ಖಂಡಿಸುತ್ತದೆ. ನಾವು ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಸಂತಾಪವನ್ನು ಸೂಚಿಸುತ್ತೇವೆ. ಅಫ್ಗಾನಿಸ್ತಾನದ ಜನರು ಭಯೋತ್ಪಾದನೆ ಮುಕ್ತ ವಾತಾವರಣದ ಭವಿಷ್ಯಕ್ಕೆ ಅರ್ಹರಾಗಿದ್ದಾರೆ' ಎಂದು ಹೇಳಿದ್ದಾರೆ.

ಇಸ್ಲಾಮಿಕ್ ಸ್ಟೇಟ್ ಆತ್ಮಾಹುತಿ ಬಾಂಬರ್ ಶುಕ್ರವಾರ ಅಫ್ಘಾನಿಸ್ತಾನದಲ್ಲಿ ಶಿಯಾ ಮುಸ್ಲಿಂ ಆರಾಧಕರಿಂದ ತುಂಬಿದ್ದ ಮಸೀದಿಯ ಮೇಲೆ ದಾಳಿ ನಡೆಸಿದ್ದು, ಕನಿಷ್ಠ 100 ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು