ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೊನೇಷ್ಯಾ: ಆತ್ಮಾಹುತಿ ಬಾಂಬ್ ದಾಳಿ, ಒಬ್ಬ ಸಾವು

Last Updated 7 ಡಿಸೆಂಬರ್ 2022, 11:33 IST
ಅಕ್ಷರ ಗಾತ್ರ

ಬಾಂಡುಂಗ್, ಇಂಡೊನೇಷ್ಯಾ: ಜಾವಾ ದ್ವೀಪದ ಪೊಲೀಸ್‌ ಠಾಣೆಯಲ್ಲಿ ಬುಧವಾರ ಸಂಭವಿಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಒಬ್ಬ ಮೃತಪಟ್ಟು, 11 ಮಂದಿ ಗಾಯಗೊಂಡಿದ್ದಾರೆ.

ಅಬು ಸಲೀಂ ಅಲಿಯಾಸ್ ಆಗಸ್ ಸುಜಾತ್ನೊ ಎಂಬ ಉಗ್ರ ಈ ದಾಳಿ ನಡೆಸಿದ್ದಾನೆ. ಎರಡು ಬಾಂಬ್‌ಗಳನ್ನು ಧರಿಸಿದ್ದ ಈತ ಬೈಕ್‌ನಲ್ಲಿ ಬಂದು ಅಸ್ತಾರ್‌ ಅನ್ಯಾರ್ ಎಂಬಲ್ಲಿನ ಪೊಲೀಸ್‌ ಠಾಣೆಗೆ ನುಗ್ಗಿ, ಒಂದು ಬಾಂಬ್‌ ಅನ್ನು ಸ್ಫೋಟಿಸಿದ್ದಾನೆ. ಪೊಲೀಸರು ಮತ್ತೊಂದು ಬಾಂಬ್‌ ಅನ್ನು ನಿಷ್ಕ್ರಿಯಗೊಳಿಸಿದರು ಎಂದು ನಗರ ಪೊಲೀಸ್ ಮುಖ್ಯಸ್ಥ ಅಸ್ವಿನ್‌ ಸಿಪಾಯುಂಗ್ ಹೇಳಿದ್ದಾರೆ.

ಬಾಂಬ್‌ ತಯಾರಕನೂ ಆಗಿರುವ ಸಲೀಂನನ್ನು ಕಳೆದ ವರ್ಷ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಈತ ಜೆಮಾಹ್ ಅನ್ಶೋರುತ್ ದೌಲಾ (ಜೆಎಡಿ) ಎಂಬ ಉಗ್ರ ಸಂಘಟನೆ ಸದಸ್ಯನಾಗಿದ್ದ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT