ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮಾಲಿಯಾದಲ್ಲಿ ಬಾಂಬ್‌ ಸ್ಫೋಟ: ಅಧಿಕಾರಿ ಸೇರಿ 11 ಮಂದಿ ಸಾವು

Last Updated 27 ಜುಲೈ 2022, 13:45 IST
ಅಕ್ಷರ ಗಾತ್ರ

ಮೊಗಾದಿಶು (ಸೋಮಾಲಿಯಾ): ದಕ್ಷಿಣ ಸೋಮಾಲಿಯಾದ ಸರ್ಕಾರಿ ಕಟ್ಟಡ ಪ್ರವೇಶ ದ್ವಾರದ ಬಳಿ ಆತ್ಮಹತ್ಯೆ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಗೊಂಡ ಪರಿಣಾಮ ಅಧಿಕಾರಿ ಸೇರಿದಂತೆ 11 ಮಂದಿ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಜಿಲ್ಲಾ ಕೇಂದ್ರದಲ್ಲಿ ಸಭೆ ನಡೆಸಿ ಹೊರ ಬರುತ್ತಿದ್ದಂತೆ ಅಪರಿಚಿತ ವ್ಯಕ್ತಿ ಬಂದು ತನ್ನನ್ನೇ ತಾನು ಸ್ಫೋಟಿಸಿಕೊಂಡ. ಈ ಘಟನೆಯಲ್ಲಿ ಜಿಲ್ಲಾ ಕಮಿಷನರ್, ಅಂಗರಕ್ಷಕ, ಹಿರಿಯರು ಹಾಗೂ ಮಹಿಳೆಯರು ಮೃತಪಟ್ಟಿದ್ದಾರೆ ಎಂದುಲೋವರ್ ಶಬೆಲ್ಲೆ ಪ್ರದೇಶದ ಮಾರ್ಕಾ ಪಟ್ಟಣದ ಆಡಳಿತದ ಪ್ರಧಾನ ಕಾರ್ಯದರ್ಶಿ ಮೊಹಮದ್ ಒಸ್ಮಾನ್ ಯಾರೋವ್ ಹೇಳಿದ್ದಾರೆ.

ಸೋಮಾಲಿಯಾದ ಮೂಲದ ಉಗ್ರ ಸಂಘಟನೆ ಅಲ್– ಶಬಾಬ್ ಸ್ಫೋಟದ ಹೊಣೆ ಹೊತ್ತು ಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT