ಸೋಮವಾರ, ಜೂನ್ 21, 2021
30 °C

ಮೇ 26ಕ್ಕೆ ‘ಸೂಪರ್‌ಮೂನ್‌’ ದರ್ಶನ

. Updated:

ಅಕ್ಷರ ಗಾತ್ರ : | |

Prajavani

ಡೆಟ್ರಾಯಿಟ್‌ (ಅಮೆರಿಕ): ಪ್ರಸಕ್ತ ವರ್ಷದ ಮೊದಲ ಚಂದ್ರಗ್ರಹಣ ಮೇ 26ರಂದು ಸಂಭವಿಸಲಿದೆ. ಈ ಬಾರಿ ಇದು ವಿಶೇಷವಾಗಿರಲಿದ್ದು  ಅಂದು ’ಸೂಪರ್‌ಮೂನ್‌’ ಗೋಚರವಾಗಲಿದೆ. ಚಂದ್ರ ಗ್ರಹಣ ಮತ್ತು ಕೆಂಪು ಚಂದ್ರನನ್ನು ಏಕಕಾಲಕ್ಕೆ ಕಾಣಬಹುದಾಗಿದೆ.

ಅಂದು ಚಂದ್ರ ಭೂಮಿಯಿಂದ ಅತೀ ಸಮೀಪದಲ್ಲಿ ಗೋಚರಿಸಲಿದ್ದಾನೆ. ಹೀಗಾಗಿ, ಚಂದ್ರ ಸಾಮಾನ್ಯಕ್ಕಿಂತಲೂ ಹೆಚ್ಚು ದೊಡ್ಡದಾಗಿ ಕಾಣಿಸುತ್ತಾನೆ.

ಚಂದ್ರನನ್ನು ಭೂಮಿಯ ನೆರಳು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆ. ಆದರೆ, ಇದು ಸಂಪೂರ್ಣವಾಗಿ ಕಪ್ಪಗಾಗುವುದಿಲ್ಲ. ಬದಲಾಗಿ, ಕೆಂಪು ಬಣ್ಣ ಕಾಣಿಸಿಕೊಳ್ಳುತ್ತದೆ. ಆದ್ದರಿಂದ, ಸಂಪೂರ್ಣ ಚಂದ್ರ ಗ್ರಹಣವನ್ನು ಕೆಂಪು ಅಥವಾ ರಕ್ತ ಚಂದ್ರ ಎಂದು ಕರೆಯಲಾಗುತ್ತದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

ಮೇ 26ರಂದು ಆಸ್ಟ್ರೇಲಿಯಾ, ಜಪಾನ್‌, ಅಮೆರಿಕ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ‘ಸೂಪರ್‌ಮೂನ್‌’ ದರ್ಶನವಾಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು