ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಕಿ ಭೂಕಂಪ: ಅವಶೇಷಗಳಡಿ ಸಂತ್ರಸ್ತರ ಚೀತ್ಕಾರ

Last Updated 7 ಫೆಬ್ರುವರಿ 2023, 13:40 IST
ಅಕ್ಷರ ಗಾತ್ರ

ದಿಯಾರ್‌ಬಕಿರ್‌ (ಟರ್ಕಿ) (ಎಪಿ): ಪ್ರಬಲ ಭೂಕಂಪಕ್ಕೆ ತುತ್ತಾಗಿ ಕುಸಿದುಬಿದ್ದ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗೆ ರಕ್ಷಣಾ ಕಾರ್ಯಕರ್ತರು ಮತ್ತು ನಾಗರಿಕರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಟರ್ಕಿಯ ಕೆಲವು ಪ್ರದೇಶಗಳಲ್ಲಿ ಧರೆಗುರುಳಿದ ಅವಶೇಷಗಳಡಿಯಿಂದೆಲ್ಲಾ ಸಂತ್ರಸ್ತರ ಚೀತ್ಕಾರಗಳು ಕೇಳಿಸುತ್ತಿವೆ. 10 ಪ್ರಾಂತ್ಯಗಳಲ್ಲಿ ಶೋಧ ಮತ್ತು ರಕ್ಷಣಾ ಸಿಬ್ಬಂದಿ, ಅಗ್ನಿ ಶಾಮಕ ಸಿಬ್ಬಂದಿ ಮತ್ತು ವೈದ್ಯಕೀಯ ಸಿಬ್ಬಂದಿ 3500 ಸೈನಿಕರ ಜೊತೆಗೂಡಿ ಹಗಲಿರುಳೆನ್ನದೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಭೂಕಂಪದ ಕೇಂದ್ರ ಕಹ್ರಾಮನ್‌ಮಾರಸ್‌ನಲ್ಲಿ ‘ನಮ್ಮ ಧ್ವನಿ ಕೇಳಿಸುತ್ತಿದೆಯೇ’ ಎಂದು ಕಿರುಚುತ್ತಾ, ಬದುಕುಳಿದವರನ್ನು ಪತ್ತೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.

ಗಾಯಾಳುಗಳನ್ನು ಟರ್ಕಿ ಸೇನಾ ವಿಮಾನ ಆಂಬುಲೆನ್ಸ್‌ ಮೂಲಕ ಇಸ್ತಾಂಬುಲ್‌ ಮತ್ತು ಅಂಕಾರಾ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಭೂಕಂಪ ಪೀಡಿತ ಪ್ರದೇಶಗಳಿಂದ ಈವರೆಗೆ 6,445 ಮಂದಿಯನ್ನು ರಕ್ಷಿಸಲಾಗಿದೆ ಎಂದು ಟರ್ಕಿ ವಿಪತ್ತು ನಿರ್ವಹಣಾ ಮಂಡಳಿ ತಿಳಿಸಿದೆ. ಭೂಕಂಪದಿಂದ 5,606 ಕಟ್ಟಡಗಳು ಕುಸಿದಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT