ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಮಾಸ್ಕಸ್‌ ಬಳಿ ಇಸ್ರೇಲ್‌ ಕ್ಷಿಪಣಿ ದಾಳಿ

Last Updated 1 ಮಾರ್ಚ್ 2021, 6:10 IST
ಅಕ್ಷರ ಗಾತ್ರ

ಡಮಾಸ್ಕಸ್‌: ಸಿರಿಯಾ ರಾಜಧಾನಿ ಡಮಾಸ್ಕಸ್‌ ಸಮೀಪವೇ ಇಸ್ರೇಲ್‌ ಭಾನುವಾರ ಕ್ಷಿಪಣಿ ದಾಳಿ ನಡೆಸಿದೆ ಎಂದು ಸೇನೆ ತಿಳಿಸಿದೆ.

ಡಮಾಸ್ಕಸ್‌ನ ದಕ್ಷಿಣ ಭಾಗಗಳ ಮೇಲೆ ಈ ದಾಳಿ ನಡೆಸಲಾಗಿದೆ. ಇರಾನ್‌ಗೆ ಸಂಬಂಧಿಸಿದ ಆಸ್ತಿಗಳನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗುರಿ ತಲುಪುವ ಮುನ್ನವೇ ಬಹುತೇಕ ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಸಿರಿಯಾ ಸೇನೆಯ ಪ್ರಕಟಣೆ ತಿಳಿಸಿದೆ. ಒಂದು ತಿಂಗಳ ಒಳಗೆ ಇದು ಎರಡನೇ ದಾಳಿಯಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಸಿರಿಯಾದಲ್ಲಿರುವ ಇರಾನ್‌ಗೆ ಸಂಬಂಧಿಸಿದ ಸೇನಾ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಇಸ್ರೇಲ್‌ ನೂರಾರು ದಾಳಿ ನಡೆಸಿದೆ. ಆದರೆ, ಈ ದಾಳಿ ತಾನೇ ನಡೆಸಿದೆ ಎಂದು ಒಪ್ಪಿಕೊಂಡಿಲ್ಲ ಮತ್ತು ಈ ಕಾರ್ಯಾಚರಣೆಗಳ ಬಗ್ಗೆ ಚರ್ಚೆಯೂ ನಡೆಸಿಲ್ಲ.

ಗುರುವಾರ ಇರಾನ್‌ ಬೆಂಬಲದ ಉಗ್ರಗಾಮಿ ಸಂಘಟನೆಗಳನ್ನು ಗುರಿಯಾಗಿರಿಸಿಕೊಂಡು ಇರಾಕ್‌ ಗಡಿಯಲ್ಲಿ ಸಿರಿಯಾ ಪ್ರದೇಶಗಳ ಮೇಲೆ ಅಮೆರಿಕ ವಾಯು ದಾಳಿ ನಡೆಸಿದ ಬೆನ್ನಲ್ಲೇ ಇಸ್ರೇಲ್‌ ದಾಳಿ ನಡೆಸಿದೆ.

ಸಿರಿಯಾದಲ್ಲಿ ಇರಾನ್‌ ತನ್ನ ಅಸ್ತಿತ್ವವನ್ನು ಬಲಪಡಿಸುವುದನ್ನು ತಡೆಯಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಇಸ್ರೇಲ್‌ ರಕ್ಷಣಾ ಸಚಿವ ಬೆನ್ನಿ ಗ್ಯಾಂಟ್ಜ್‌ ಶುಕ್ರವಾರ ಹೇಳಿದ್ದರು.

ಸಿರಿಯಾದಲ್ಲಿ ಇರಾನ್‌ ಪಡೆಗಳಿವೆ ಎನ್ನುವುದನ್ನು ಅಧ್ಯಕ್ಷ ಬಷರ್‌ ಅಲ್‌–ಅಸ್ಸಾದ್‌ ಸರ್ಕಾರ ಇದುವರೆಗೆ ಬಹಿರಂಗವಾಗಿ ಒಪ್ಪಿಕೊಂಡಿಲ್ಲ. ಸೇನಾ ಸಲಹೆಗಾರರನ್ನು ಮಾತ್ರ ಇರಾನ್‌ ಕಳುಹಿಸಿದೆ ಎಂದು ಪ್ರತಿಪಾದಿಸುತ್ತಾ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT