ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಸಿನ್‌ ಮಲ್ಲಿಕ್‌ ಸೇರಿ 10 ಮಂದಿ ವಿರುದ್ಧ ದೋಷಾರೋಪ ನಿಗದಿ

ರುಬೈಯಾ ಸಯೀದ್‌ ಅಪಹರಣ ಪ್ರಕರಣ
Last Updated 12 ಜನವರಿ 2021, 8:58 IST
ಅಕ್ಷರ ಗಾತ್ರ

ಜಮ್ಮು: ಮಾಜಿ ಗೃಹ ಸಚಿವ ಮುಫ್ತಿ ಮೊಹಮದ್‌ ಸಯೀದ್‌ ಅವರ ಮಗಳು ರುಬೈಯಾ ಸಯೀದ್‌ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಕೆಎಲ್‌ಎಫ್‌ ಮುಖ್ಯಸ್ಥ ಯಾಸಿನ್‌ ಮಲ್ಲಿಕ್‌ ಸೇರಿದಂತೆ 10 ಮಂದಿಯ ವಿರುದ್ಧ ಟಾಡಾ (ಟಿಎಡಿಎ) ವಿಶೇಷ ನ್ಯಾಯಾಲಯವು ಸೋಮವಾರ ದೋಷಾರೋಪ ನಿಗದಿ ಮಾಡಿದೆ.

ಉಗ್ರರಿಗೆ ಆರ್ಥಿಕ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) 2019ರಲ್ಲಿ ಯಾಸಿನ್‌ ಮಲ್ಲಿಕ್‌ನನ್ನು ಬಂಧಿಸಿತ್ತು. ಸದ್ಯ ಮಲ್ಲಿಕ್‌ ತಿಹಾರ್‌ ಜೈಲಿನಲ್ಲಿ ಇದ್ದಾನೆ.

1990ರ ಜನವರಿಯಲ್ಲಿ ಐಎಎಫ್‌ ಸಿಬ್ಬಂದಿ ಹತ್ಯೆ ಪ್ರಕರಣದಡಿ ಈ ಹಿಂದೆ ಕೂಡ ಟಾಡಾ ವಿಶೇಷ ನ್ಯಾಯಾಲಯವು ಯಾಸಿನ್‌ ಮಲ್ಲಿಕ್‌ ಮತ್ತು ಆರು ಮಂದಿಯ ವಿರುದ್ಧ ಆರೋಪ ನಿಗದಿ ಮಾಡಿತ್ತು.

ಇದೀಗ ವಿಶೇಷ ನ್ಯಾಯಾಲಯದ ನ್ಯಾಯಧೀಶ ಸುನಿಲ್‌ ಗುಪ್ತ ಅವರು ರುಬೈಯಾ ಸಯೀದ್‌ ಅಪಹರಣ ಪ್ರಕರಣದಡಿ ಯಾಸಿನ್‌ ಮಲ್ಲಿಕ್‌, ಅಲಿ ಮೊಹಮ್ಮದ್ ಮಿರ್, ಮೊಹಮ್ಮದ್ ಜಮಾನ್ ಮಿರ್, ಇಕ್ಬಾಲ್ ಅಹ್ಮದ್ ಗಂಡ್ರೂ, ಜಾವೇದ್ ಅಹ್ಮದ್ ಮಿರ್, ಮೊಹಮ್ಮದ್ ರಫೀಕ್ ಪಹ್ಲೂ, ಮಂಜೂರ್ ಅಹ್ಮದ್ ಸೋಫಿ, ವಜಾಹತ್ ಬಶೀರ್, ಮೆಹರಾಜ್-ಉದ್-ದಿನ್ ಶೇಖ್ ಮತ್ತು ಶೋಕತ್ ಅಹ್ಮದ್ ಬಕ್ಷಿ ವಿರುದ್ಧ ಆರೋಪ ನಿಗದಿ ಮಾಡಿದ್ದಾರೆ.

ಡಿಸೆಂಬರ್‌ 1989ರಲ್ಲಿ ಅಂದಿನ ಕೇಂದ್ರ ಗೃಹ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬೈಯಾ ಸಯೀದ್ ಅವರನ್ನು ಶ್ರೀನಗರದಿಂದ ಜಿಕೆಎಲ್‌ಎಫ್‌ ಸದಸ್ಯರು ಅಪಹರಿಸಿದ್ದರು.

ಈ ಪ್ರಕರಣ ಸಂಬಂಧ ಸಿಬಿಐ 24 ಮಂದಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು. ಇದರಲ್ಲಿ 10 ಮಂದಿಯ ವಿರುದ್ಧ ವಿಶೇಷ ನ್ಯಾಯಾಲವು ಆರೋಪ ನಿಗದಿ ಮಾಡಿದೆ. 12 ಮಂದಿ ಪರಾರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT