ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈವಾನ್‌ನಲ್ಲಿ ಪ್ರಬಲ ಭೂಕಂಪನ: ರಿಕ್ಟರ್‌ ಮಾಪಕದಲ್ಲಿ 6.8 ತೀವ್ರತೆ ದಾಖಲು

Last Updated 18 ಸೆಪ್ಟೆಂಬರ್ 2022, 11:31 IST
ಅಕ್ಷರ ಗಾತ್ರ

ಬೀಜಿಂಗ್ (ಎಪಿ): ತೈವಾನ್‌ನ ಹಲವೆಡೆ ಭೂಕಂಪನ ಸಂಭವಿಸಿದ್ದು ಒಂದು ಕಟ್ಟಡ ಕುಸಿದಿದ್ದು, ಮೂವರು ಸಿಲುಕಿದ್ದು, ರಕ್ಷಣಾ ಕಾರ್ಯ ನಡೆದಿದೆ. ಭೂಕಂಪನದ ತೀವ್ರತೆರಿಕ್ಟರ್‌ ಮಾಪಕದಲ್ಲಿ 6.8 ದಾಖಲಾಗಿದೆ.

ಭೂಕಂಪನದ ಕೇಂದ್ರಬಿಂದು ಚಿಶಾಂಗ್‌ ನಗರವಾಗಿದೆ ಎಂದು ತೈವಾನ್‌ನ ಕೇಂದ್ರೀಯ ಹವಾಮಾನ ಇಲಾಖೆಯು ತಿಳಿಸಿದೆ. ಯುಲಿ ನಗರದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದಿದೆ.

ಘಟನಾ ಸ್ಥಳದಿಂದ ಒಬ್ಬರನ್ನು ರಕ್ಷಿಸಿದ್ದು, ಉಳಿದ ಮೂವರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಈ ಬೆನ್ನಲ್ಲೇ ಜಪಾನ್ ಹವಾಮಾನ ಇಲಾಖೆ ತೈವಾನ್‌ ಸಮೀಪದ ದಕ್ಷಿಣ ಜಪಾನ್‌ ದ್ವೀಪ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಿತ್ತು. ಕೆಲಹೊತ್ತಿನ ನಂತರ ಅದನ್ನು ವಾಪಸು ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT