ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಮನಿಯಲ್ಲಿ ಪಿಜ್ಜಾ ಡೆಲಿವರಿ ಹುಡುಗನಾದ ಅಫ್ಗಾನಿಸ್ತಾನದ ಮಾಜಿ ಸಚಿವ

Last Updated 25 ಆಗಸ್ಟ್ 2021, 9:28 IST
ಅಕ್ಷರ ಗಾತ್ರ

ಈ ಹಿಂದಿನ ಅಫ್ಗಾನಿಸ್ತಾನ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಸೈಯದ್‌ ಅಹ್ಮದ್‌ ಸಾದತ್‌ ಅವರೀಗ ಜರ್ಮನಿಯಲ್ಲಿ ಪಿಜ್ಜಾ ಡೆಲಿವರಿ ಹುಡುಗನಾಗಿ ಕೆಲಸ ಮಾಡುತ್ತಿದ್ದಾರೆ.

ಸೈಯದ್‌ ಅವರು ಅಶ್ರಫ್‌ ಘನಿ ನೇತೃತ್ವದ ಸರ್ಕಾರದಲ್ಲಿ ಸಂವಹನ ಮತ್ತು ತಂತ್ರಜ್ಞಾನ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.

20 ವರ್ಷಗಳ ಬಳಿಕ ಕಾಬೂಲ್‌ ಮೇಲೆ ತಾಲಿಬಾನ್‌ ಮತ್ತೆ ಹಿಡಿತ ಸಾಧಿಸಿದ ನಂತರ ಸೈಯದ್‌ ಅವರು ಅಫ್ಗಾನಿಸ್ತಾನವನ್ನು ತೊರೆದಿದ್ದರು.

ಈಗ ಜರ್ಮನಿಯಲ್ಲಿ ಜೀವನೋಪಾಯ ಕಂಡುಕೊಂಡಿರುವ ಅವರು ಪಿಜ್ಜಾ ಡೆಲಿವರಿ ಬಾಯ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಾಧ್ಯಮ ಸಂಸ್ಥೆ ಅಲ್‌ ಜಜೀರಾ(ಅರೇಬಿಕ್) ವರದಿ ಮಾಡಿದೆ.

ಸೈಯದ್‌ ಅವರು ಪಿಜ್ಜಾ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿರುವ ಫೋಟೋಗಳನ್ನೂ ಅಲ್‌ ಜಜೀರಾ ಟ್ವೀಟ್‌ ಮಾಡಿದೆ.

ಅಫ್ಗಾನಿಸ್ತಾನ ಸೇನೆಗೆ ಅಮೆರಿಕ ಪಡೆಗಳ ಬೆಂಬಲ ಕ್ಷೀಣಿಸುತ್ತಿದ್ದಂತೆ ತಾಲಿಬಾನಿಗಳು ಮತ್ತೆ ಹಿಡಿತ ಸ್ಥಾಪಿಸಿದ್ದಾರೆ. 20 ವರ್ಷಗಳ ಬಳಿಕ ಅಫ್ಗಾನಿಸ್ತಾನ ತಾಲಿಬಾನಿಗಳ ಕೈವಶವಾಗಿದೆ

ಇವನ್ನೂ ಓದಿ
*

*
*
*
*
*
​*
*
*
*
*
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT