ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

Last Updated 6 ಜನವರಿ 2022, 6:07 IST
ಅಕ್ಷರ ಗಾತ್ರ

ಕಾಬೂಲ್‌: ಅಫ್ಗಾನಿಸ್ತಾನದಲ್ಲಿ ಹಿಮ ಮತ್ತು ಮಳೆ ಭಾರಿ ಪ್ರಮಾಣದಲ್ಲಿ ಸುರಿಯುತ್ತಿರುವುದರಿಂದ ದೇಶದ ಬಹುಪಾಲು ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಪ್ರತಿಕೂಲ ಹವಾಮಾನ ಎದುರಿಸಲು ಸಿದ್ಧತೆ ಕೈಗೊಳ್ಳುವಂತೆ ಪ್ರಾಂತೀಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

‘ಫ್ರೀ ಆಫ್ ಅಫ್ಗಾನಿಸ್ತಾನ್’ ರೇಡಿಯೊದೊಂದಿಗೆ ಮಾತನಾಡಿರುವ ವಿಪತ್ತು ನಿರ್ವಹಣಾ ಸಚಿವಾಲಯದ ಅಧಿಕಾರಿಯೊಬ್ಬರು, ವಿಪತ್ತು ಎದುರಾಗಿರುವ ಪ್ರಾಂತ್ಯಗಳಿಗೆ ಅಗತ್ಯ ವಸ್ತುಗಳನ್ನು ಸಾಗಿಸಲಾಗುತ್ತಿದೆ ಎಂದು ಹೇಳಿರುವುದಾಗಿ ಸುದ್ದಿ ಮಾಧ್ಯಮ ‘ಖಾಮಾ ಪ್ರೆಸ್’ ವರದಿ ಮಾಡಿದೆ.

ಭಾರೀ ಹಿಮಪಾತದಿಂದಾಗಿ ರಸ್ತೆಗಳು ಮುಚ್ಚಿಹೋಗಿವೆ. ಅದನ್ನು ತೆರವುಗೊಳಿಸಲು ತುರ್ತು ಕಾರ್ಯಾಚರಣೆ ಕೈಗೊಳ್ಳಲು ಅಧಿಕಾರಿಗಳು ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ಅಫ್ಗಾನಿಸ್ತಾನದ ರಾಜಧಾನಿಯನ್ನು ಉತ್ತರ ಪ್ರಾಂತ್ಯಗಳೊಂದಿಗೆ ಸಂಪರ್ಕಿಸುವ ಸಲಾಂಗ್ ಹೆದ್ದಾರಿಯು ಭಾರೀ ಹಿಮಪಾತದಿಂದಾಗಿ ಮುಚ್ಚಿ ಹೋಗಿದೆ.

ಅಫ್ಗಾನಿಸ್ತಾನದ 34 ಪ್ರಾಂತ್ಯಗಳಲ್ಲಿ 32ರಲ್ಲಿ ಹಿಮ ಮತ್ತು ಮಳೆ ಸುರಿಯುತ್ತಿದೆ. ಹೀಗಾಗಿ ರಸ್ತೆಗಳು ಒಂದೆಡೆ ಮುಚ್ಚಿ ಹೋಗಿದ್ದರೆ, ಮತ್ತೊಂದೆಡೆ ಪ್ರವಾಹ ಉಂಟಾಗಿದೆ.

ಈ ವಾರದ ಆರಂಭದಲ್ಲಿ, ಭಾರೀ ಹಿಮದಿಂದ ಉಂಟಾದ ಅಪಘಾತಗಳಲ್ಲಿ ಏಳು ಜನರು ಮೃತಪಟ್ಟಿದ್ದಾರೆ. 26 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT