ಅಫ್ಗಾನಿಸ್ತಾನ: ಕನಸಾಗೇ ಉಳಿದ ಹೆಣ್ಣು ಮಕ್ಕಳ ಶಿಕ್ಷಣ, ಹುಸಿಯಾದ ತಾಲಿಬಾನ್ ಭರವಸೆ

ಕಾಬೂಲ್: ಅಫ್ಗಾನಿಸ್ತಾನದಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭದ ದಿನವಾದ ಬುಧವಾರದಿಂದ ಬಾಲಕಿಯರಿಗೂ ಶಾಲೆ ಆರಂಭಿಸಲಾಗುವುದು ಎಂಬ ತಾಲಿಬಾನ್ ಆಡಳಿತದ ಮಾತು ಹುಸಿಯಾಗಿದ್ದು, ಶಾಲೆಗೆ ಬಂದ ಬಾಲಕಿಯರು ವಾಪಸ್ ಮನೆಗೆ ತೆರಳಬೇಕಾಯಿತು.
ಆರನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ ಶಾಲೆಯಲ್ಲಿ ಕಲಿಕೆಗೆ ಅವಕಾಶ ನೀಡಬೇಕು ಎಂಬ ಅಂತರರಾಷ್ಟ್ರೀಯ ಒತ್ತಡಕ್ಕೆ ಮಣಿದಿದ್ದ ತಾಲಿಬಾನ್, ಹೊಸ ಶೈಕ್ಷಣಿಕ ವರ್ಷದಿಂದ ಅದನ್ನು ಪ್ರಾರಂಭಿಸುವುದಾಗಿ ಸೋಮವಾರವಷ್ಟೇ ಭರವಸೆ ನೀಡಿತ್ತು. ಆದರೆ ಮಂಗಳವಾರ ರಾತ್ರಿ ತನ್ನ ನಿರ್ಧಾರ ಬದಲಿಸಿದ್ದು, ಬುಧವಾರ ಹೊಸ ನಿರೀಕ್ಷೆಯೊಂದಿಗೆ ಶಾಲೆಗಳಿಗೆ ತೆರಳಿದ ವಿದ್ಯಾರ್ಥಿನಿಯರು ನಿರಾಸೆಗೊಂಡರು.
ಕೋವಿಡ್: ಮಾರ್ಚ್ 31ರಿಂದ ನಿರ್ಬಂಧಗಳು ತೆರವು, ಮಾಸ್ಕ್ ಧರಿಸುವಿಕೆ ಮುಂದುವರಿಕೆ
ತಾಲಿಬಾನ್ ಆಡಳಿತದ ಪ್ರತಿನಿಧಿ ವಹೀದುಲ್ಲಾ ಹಶ್ಮಿ ಸರ್ಕಾರದ ಈ ಅನಿರೀಕ್ಷಿತ ನಿರ್ಧಾರವನ್ನು ಬುಧವಾರ ದೃಢಪಡಿಸಿದರು.
‘ಹೆಣ್ಣು ಮಕ್ಕಳಿಗೆ ಶಾಲೆ ಇನ್ನು ಮುಚ್ಚಿರುತ್ತದೆ ಎಂಬ ನಮ್ಮ ನಾಯಕರ ನಿರ್ಧಾರವು ನಮಗೆ ಮಂಗಳವಾರ ತಡರಾತ್ರಿ ತಿಳಿಯಿತು. ಆದರೆ ಶಾಲೆಗಳು ಶಾಶ್ವತವಾಗಿ ಮುಚ್ಚಿರುತ್ತವೆ ಎಂದು ನಾವು ಹೇಳುವುದಿಲ್ಲ’ ಎಂದು ಹಶ್ಮಿ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.