ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗನ್‌ ತೊರೆವ ಧಾವಂತ: 7 ಬಲಿ

Last Updated 22 ಆಗಸ್ಟ್ 2021, 21:30 IST
ಅಕ್ಷರ ಗಾತ್ರ

ಕಾಬೂಲ್‌: ಕಾಬೂಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ 7 ಜನರು ಮೃತಪಟ್ಟಿದ್ದಾರೆ ಎಂದು ಬ್ರಿಟನ್ ರಕ್ಷಣಾ ಸಚಿವಾಲಯ ಹೇಳಿದೆ.ಅದರ ಬೆನ್ನಲ್ಲೇ, ವಿಮಾನ ನಿಲ್ದಾಣದ ಹೊರಗೆ ಜನರನ್ನು ನಿಯಂತ್ರಿಸಲು ತಾಲಿಬಾನ್‌ ಗುಂಡು ಹಾರಾಟ ನಡೆಸಿದೆ.

ವಿಮಾನ ನಿಲ್ದಾಣ ಪ್ರವೇಶಿಸಲು ನಾಗರಿಕರು ಒಮ್ಮೆಲೇ ನುಗ್ಗಿದಾಗ, ಪ್ರವೇಶದ್ವಾರದ ಬಳಿ ನೂಕುನುಗ್ಗಲು ಉಂಟಾಗಿತ್ತು. ಆಗ ಏಳು ಜನರು ಮೃತಪಟ್ಟಿದ್ದಾರೆ. ನೂಕುನುಗ್ಗಲಿನಲ್ಲಿ ಗಾಯಗೊಂಡವರನ್ನು ನಿಲ್ದಾಣದ ಗೋಡೆಯ ಮೇಲಿಂದ ನ್ಯಾಟೊ ಸೈನಿಕರು ಎತ್ತಿಕೊಳ್ಳುತ್ತಿರುವ ವಿಡಿಯೊವನ್ನು ಸ್ಕೈನ್ಯೂಸ್ ಪ್ರಸಾರ ಮಾಡಿದೆ.

‘ವಿಮಾನ ನಿಲ್ದಾಣದ ಬಳಿ ಪರಿಸ್ಥಿತಿ ತೀರಾ ಗಂಭೀರವಾಗಿದೆ. ಆದರೆ ನಾವು ಶಕ್ತಿಮೀರಿ ಪ್ರಯತ್ನಿಸುತ್ತಿ
ದ್ದೇವೆ. ಎಲ್ಲರನ್ನೂ ಸುರಕ್ಷಿತವಾಗಿ ತೆರವು ಮಾಡಲು ಯತ್ನಿಸುತ್ತಿದ್ದೇವೆ’ ಎಂದು ಬ್ರಿಟನ್ ರಕ್ಷಣಾ ಸಚಿವಾಲಯ ಹೇಳಿದೆ.

‘ವಿಮಾನ ನಿಲ್ದಾಣದ ಬಳಿ ಉಂಟಾದ ನೂಕುನುಗ್ಗಲು, ವಿಮಾನದ ಚಕ್ರಗಳಿಗೆ ಸಿಲುಕಿ ಮತ್ತು ವಿಮಾನದಿಂದ ಬಿದ್ದು ಒಂದು ವಾರದಲ್ಲಿ 20ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ನೂಕುನುಗ್ಗಲನ್ನು ನಿಯಂತ್ರಿಸಲು ತಾಲಿಬಾನ್ ನಡೆಸಿದ ಗುಂಡಿನ ದಾಳಿಯಲ್ಲೂ ಹಲವರು ಮೃತಪಟ್ಟಿದ್ದಾರೆ’ ಎಂದು ನ್ಯಾಟೊ ಪಡೆ ಮಾಹಿತಿ ನೀಡಿದೆ.

‘ಕಾಬೂಲ್‌ ವಿಮಾನ ನಿಲ್ದಾಣದ ಹೊರಗೆ ನ್ಯಾಟೊ ಪಡೆಯ ಒಬ್ಬ ಸೈನಿಕನೂ ಕಾರ್ಯನಿರ್ವಹಿಸುತ್ತಿಲ್ಲ. ವಿಮಾನ ನಿಲ್ದಾಣದೊಳಗೆ ನಾವು ಪರಿಸ್ಥಿತಿ ನಿಭಾಯಿಸುತ್ತಿದ್ದೇವೆ. ತಾಲಿಬಾನ್ ಜತೆಗೆ ಸಂಘರ್ಷ ನಡೆಯುವುದನ್ನು ತಡೆಯುವ ಉದ್ದೇಶದಿಂದಲೇ ವಿಮಾನ ನಿಲ್ದಾಣದೊಳಗಿನ ಕಾರ್ಯಾಚರಣೆಗೆ ನಾವು ಸೀಮಿತವಾಗಿದ್ದೇವೆ’ ಎಂದು ನ್ಯಾಟೊ ಪಡೆ ಹೇಳಿದೆ.

ಅಮೆರಿಕ, ಬ್ರಿಟನ್‌ ನಿರಾಶ್ರಿತರ ತೆರವು ಕಾರ್ಯಾಚರಣೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ಕಾಬೂಲ್ ವಿಮಾನ ನಿಲ್ದಾಣಕ್ಕೆ ಕಳುಹಿಸಿವೆ. ಆದರೆ ಎರಡೂ ದೇಶಗಳ ಸೈನಿಕರು ತಮ್ಮ ಕಾರ್ಯಾಚರಣೆಯನ್ನು ವಿಮಾನ ನಿಲ್ದಾಣದ ಒಳಾವರಣಕ್ಕೆ ಸೀಮಿತಗೊಳಿಸಿದ್ದಾರೆ. ತಾಲಿಬಾನ್‌ ಜತೆಗೆ ಸಂಭಾವ್ಯ ಸಂಘರ್ಷ ತಡೆಯಲು ಹೀಗೆ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಗುಂಡು ಹಾರಿಸಿದ ತಾಲಿಬಾನ್: ಅಫ್ಗನ್ತೊರೆಯುವವರು, ಸುಲಭವಾಗಿ ತೆರಳಲು ಅನುಕೂಲ ಮಾಡಿಕೊಡುತ್ತೇವೆ. ಯಾವುದೇ ತೊಂದರೆ ಮಾಡುವುದಿಲ್ಲ ಎಂದು ತಾಲಿಬಾನ್ ನಾಯಕರು ಭರವಸೆ ನೀಡಿದ್ದರು. ಆದರೆ, ಶನಿವಾರ ಮತ್ತು ಭಾನುವಾರ ವಿಮಾನ ನಿಲ್ದಾಣದ ಬಳಿ ಜನರ ಮೇಲೆ ತಾಲಿಬಾನಿಗಳು ಗುಂಡು ಹಾರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT