ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ, ನ್ಯಾಟೋ ಪಡೆಗಳ ಜೊತೆ ಕೆಲಸ ಮಾಡಿದವರನ್ನು ಹುಡುಕಾಡುತ್ತಿರುವ ತಾಲಿಬಾನ್

Last Updated 19 ಆಗಸ್ಟ್ 2021, 16:59 IST
ಅಕ್ಷರ ಗಾತ್ರ

ಕಾಬೂಲ್: ತಮ್ಮ ವಿರೋಧಿಗಳ ವಿರುದ್ಧ ಪ್ರತೀಕಾರಕ್ಕೆ ಮುಂದಾಗುವುದಿಲ್ಲ ಎನ್ನುತ್ತಲೇ ತಾಲಿಬಾನಿಗಳು ತಮ್ಮ ವಿರುದ್ಧ ಕೆಲಸ ಮಾಡಿದವರನ್ನು ಹುಡುಕುವ ಯತ್ನದಲ್ಲಿ ತೊಡಗಿದ್ದಾರೆ.

ತಮ್ಮ ವಿರುದ್ಧ ಅಮೆರಿಕ ಮತ್ತು ನ್ಯಾಟೋ ಪಡೆಗಳ ಜೊತೆ ಕೆಲಸ ಮಾಡಿದ್ದ ಜನರ ಹುಡುಕಾಟವನ್ನು ತಾಲಿಬಾನ್ ತೀವ್ರಗೊಳಿಸುತ್ತಿದೆ ಎಂದು ವಿಶ್ವಸಂಸ್ಥೆಯ ಗೌಪ್ಯ ದಾಖಲೆ ಹೇಳುತ್ತಿದೆ.

ವಿಶ್ವಸಂಸ್ಥೆಯ ಅಪಾಯ ಮೌಲ್ಯಮಾಪನ ಸಮಾಲೋಚಕರು ಎಎಫ್‌ಪಿಗೆ ಒದಗಿಸಿದ ಮಾಹಿತಿಯಲ್ಲಿ ತಾಲಿಬಾನಿಗಳು, ತಮಗೆ ಬೇಕಾದವರ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ದಾಖಲೆಯ ಪ್ರಕಾರ, ಆಫ್ಗಾನ್ ಮಿಲಿಟರಿ, ಪೊಲೀಸ್ ಮತ್ತು ಗುಪ್ತಚರ ಘಟಕಗಳ ಕೇಂದ್ರಸ್ಥಾನದಲ್ಲಿ ಕೆಲಸ ಮಾಡಿದವರು ಹೆಚ್ಚಿನ ಅಪಾಯದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ತಾಲಿಬಾನ್ ಉಗ್ರರು ತಾವು ಬಂಧಿಸಲು ಬಯಸುವ ವ್ಯಕ್ತಿಗಳು ಮತ್ತು ಅವರ ಕುಟುಂಬ ಸದಸ್ಯರ ಮನೆ-ಮನೆಗೆ ಭೇಟಿ ನೀಡುತ್ತಿದ್ದಾರೆ ಎಂದು ವರದಿ ಹೇಳುತ್ತದೆ.

ಕಾಬೂಲ್ ವಿಮಾನ ನಿಲ್ದಾಣದ ದಾರಿಯಲ್ಲಿ ಉಗ್ರರು ವ್ಯಕ್ತಿಗಳನ್ನು ಪರೀಕ್ಷಿಸುತ್ತಿದ್ದಾರೆ. ರಾಜಧಾನಿ ಕಾಬೂಲ್ ಮತ್ತು ಜಲಾಲಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದ್ದಾರೆ.

ವಿಶ್ವಸಂಸ್ಥೆಗೆ ಗುಪ್ತಚರ ಮಾಹಿತಿ ಒದಗಿಸುವ ನಾರ್ವೇಜಿಯನ್ ಸೆಂಟರ್ ಫಾರ್ ಗ್ಲೋಬಲ್ ಅನಾಲಿಸಿಸ್ ಸಂಸ್ಥೆಯಿಂದ ಬುಧವಾರ ಈ ಮಾಹಿತಿ ತಲುಪಿದೆ.

ಮಾಹಿತಿ ನೀಡಲು ನಿರಾಕರಿಸುವ ಕುಟುಂಬಗಳನ್ನು ಶರಿಯಾ ಕಾನೂನಿನ ಪ್ರಕಾರ ವಿಚಾರಣೆಗೆ ಒಳಪಡಿಸುತ್ತಾರೆ ಮತ್ತು ಶಿಕ್ಷಿಸುತ್ತಿದ್ದಾರೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕ್ರಿಶ್ಚಿಯನ್ ನೆಲ್ಲೆಮನ್ ಎಎಫ್‌ಪಿಗೆ ತಿಳಿಸಿದರು.

‘ಈ ಹಿಂದೆ ನ್ಯಾಟೋ ಮತ್ತು ಅಮೆರಿಕ ಪಡೆಗಳು ಮತ್ತು ಅವರ ಮಿತ್ರರೊಂದಿಗೆ ಕೆಲಸ ಮಾಡಿದ್ದ ವ್ಯಕ್ತಿಗಳು ಅವರ ಕುಟುಂಬ ಸದಸ್ಯರೊಂದಿಗೆ ಚಿತ್ರಹಿಂಸೆ ಮತ್ತು ಮರಣದಂಡನೆಗೆ ಗುರಿಯಾಗುತ್ತಾರೆ’ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT