ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇರೆ ದೇಶಗಳ ಮೇಲೆ ದಾಳಿಗೆ ಅಫ್ಗನ್‌ ನೆಲ ಬಳಸಲಾಗದು: ತಾಲಿಬಾನ್‌ ನಾಯಕ

Last Updated 6 ಜುಲೈ 2022, 13:16 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ :‘ಬೇರೆ ರಾಷ್ಟ್ರಗಳ ಮೇಲೆ ದಾಳಿಗೆ ಅಫ್ಗಾನಿಸ್ತಾನದ ನೆಲ ಬಳಸಲಾಗದು. ಹಾಗೆಯೇ ನಮ್ಮ ದೇಶದ ಆಂತರಿಕ ವ್ಯವಹಾರಗಳಲ್ಲಿ ಅಂತರರಾಷ್ಟ್ರೀಯ ಸಮುದಾಯ ಹಸ್ತಕ್ಷೇಪ ಮಾಡಬಾರದು’ ಎಂದು ತಾಲಿಬಾನ್‌ ಪರಮೋಚ್ಚ ನಾಯಕ ಮುಲ್ಲಾ ಹೈಬತುಲ್ಲಾ ಅಖುಂದ್‌ಝಾದ ಬುಧವಾರ ಹೇಳಿದ್ದಾರೆ.

ಬರಲಿರುವ ಈದ್‌–ಅಲ್‌–ಆಧಾ ನಿಮಿತ್ತ ಮಾಡಿದ ತಮ್ಮ ಭಾಷಣದಲ್ಲಿ ಅಖುಂದ್‌ಝಾದ ಅವರು ‘ಇತರ ದೇಶಗಳ ಭದ್ರತೆಗೆ ಆತಂಕವೊಡ್ಡಲು ನಮ್ಮ ನೆಲವನ್ನು ಯಾವುದೇ ರಾಷ್ಟ್ರಬಳಸಿಕೊಳ್ಳುವುದಕ್ಕೆ ಆಸ್ಪದ ನೀಡುವುದಿಲ್ಲವೆಂದು ನಮ್ಮ ನೆರೆಯ ದೇಶಗಳಿಗೆ ಭರವಸೆ ಕೊಡುತ್ತೇವೆ. ಹಾಗೆಯೇ ನಾವು ಕೂಡ, ನಮ್ಮ ಆಂತರಿಕ ವ್ಯವಹಾರಗಳಲ್ಲಿ ಇತರ ದೇಶಗಳು ಹಸ್ತಕ್ಷೇಪ ಮಾಡಬಾರದೆಂದು ಬಯಸುತ್ತೇವೆ’ ಎಂದು ಹೇಳಿದರು.

‘ದ್ವಿ‍ಪಕ್ಷೀಯ ಮಾತುಕತೆಯ ಚೌಕಟ್ಟಿನೊಳಗೆ ಅಮೆರಿಕ ಸೇರಿ ವಿಶ್ವದ ಎಲ್ಲ ರಾಷ್ಟ್ರಗಳೊಂದಿಗೆ ನಾವು ಉತ್ತಮ ರಾಜಕೀಯ ಮತ್ತು ಆರ್ಥಿಕ ಹಾಗೂ ರಾಜತಾಂತ್ರಿಕ ಸಂಬಂಧ ಬಯಸುತ್ತೇವೆ. ಹಾಗೆಯೇ ಎಲ್ಲರ ಹಿತವನ್ನೂ ಪರಿಗಣಿಸುತ್ತೇವೆ’ ಎಂದು ಹೇಳಿದ್ದಾರೆ.

ದೇಶದ ಆಡಳಿತ ಚುಕ್ಕಾಣಿ ವಶಕ್ಕೆ ತೆಗೆದುಕೊಳ್ಳುವುದಕ್ಕೂ ಮೊದಲು, ಭಯೋತ್ಪಾದನೆಯ ವಿರುದ್ಧ ಹೋರಾಡುವುದಾಗಿ 2020ರಲ್ಲಿ ಅಮೆರಿಕದ ಜತೆಗೆ ಸಹಿ ಹಾಕಿರುವ ಒಪ್ಪಂದಕ್ಕೆ ಬದ್ಧವಾಗಿರುವುದಾಗಿ ತಾಲಿಬಾನ್ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT