ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಬ್‌ ದಾಳಿ: ಅಫ್ಗಾನ್‌ ಧರ್ಮಗುರು ರಹೀಮುಲ್ಲಾ ಹಕ್ಕಾನಿ ಹತ್ಯೆ

Last Updated 12 ಆಗಸ್ಟ್ 2022, 3:28 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ತಾಲಿಬಾನ್‌ನ ಪ್ರಮುಖ ಧರ್ಮಗುರು ರಹೀಮುಲ್ಲಾ ಹಕ್ಕಾನಿ ಅವರು ಬಾಂಬ್‌ ದಾಳಿಯಲ್ಲಿ ಗುರುವಾರ ಹತರಾಗಿದ್ದಾರೆ.

‘ಶತ್ರು ಪಡೆಯವರು ಬಾಂಬ್‌ ದಾಳಿ ನಡೆಸಿ ಹಕ್ಕಾನಿ ಅವರನ್ನು ಧಾರ್ಮಿಕ ಕೇಂದ್ರದಲ್ಲೇ ಹತ್ಯೆ ಮಾಡಿದ್ದಾರೆ’ ಎಂದು ತಾಲಿಬಾನ್‌ನ ಸಹ ವಕ್ತಾರ ಬಿಲಾಲ್‌ ಕರೀಮಿ ಹೇಳಿದ್ದಾರೆ. ಸದ್ಯ ಯಾವ ಗುಂಪಿನವರೂ ಈ ಹತ್ಯೆಯ ಹೊಣೆ ಹೊತ್ತುಕೊಂಡಿಲ್ಲ.

ಇಸ್ಲಾಮಿಕ್ ಸ್ಟೇಟ್(ಐಎಸ್) ಭಯೋತ್ಪಾದಕ ಸಂಘಟನೆ ಹತ್ಯೆಯ ಹೊಣೆ ಹೊಂತ್ತುಕೊಂಡಿದೆ. ಟೆಲಿಗ್ರಾಂನಲ್ಲಿನ ತನ್ನ ಚಾನೆಲ್‌ನಲ್ಲಿ ಈ ಬಗ್ಗೆ ತಿಳಿಸಿದೆ.

ದಾಳಿಕೋರನು ಈ ಹಿಂದೆ ತನ್ನ ಕಾಲು ಕಳೆದುಕೊಂಡಿದ್ದ ಮತ್ತು ಕೃತಕ ಪ್ಲಾಸ್ಟಿಕ್ ಕಾಲಿನಲ್ಲಿ ಸ್ಫೋಟಕಗಳನ್ನು ಅಡಗಿಸಿಟ್ಟಿದ್ದ ಎಂದು ತಾಲಿಬಾನ್ ಮೂಲಗಳು ತಿಳಿಸಿವೆ.

‘ಈ ವ್ಯಕ್ತಿ ಯಾರು ಮತ್ತು ಶೇಖ್ ರಹೀಮುಲ್ಲಾ ಹಕ್ಕಾನಿಯ ಕಚೇರಿಯನ್ನು ಪ್ರವೇಶಿಸಲು ಈ ಪ್ರಮುಖ ಸ್ಥಳಕ್ಕೆ ಕರೆತಂದವರು ಯಾರು ಎಂದು ನಾವು ತನಿಖೆ ನಡೆಸುತ್ತಿದ್ದೇವೆ. ಅಫ್ಗಾನಿಸ್ತಾನದ ಇಸ್ಲಾಮಿಕ್ ಎಮಿರೇಟ್‌ಗೆ ಇದು ಬಹಳ ದೊಡ್ಡ ನಷ್ಟವಾಗಿದೆ’ಎಂದು ಅಫ್ಗಾನಿಸ್ತಾನದ ಆಂತರಿಕ ಸಚಿವಾಲಯದ ಹಿರಿಯ ತಾಲಿಬಾನ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಹಕ್ಕಾನಿ ತಾಲಿಬಾನಿಗಳ ಪ್ರಮುಖ ಧರ್ಮಗುರುಗಳಾಗಿದ್ದರು. ಏಳು ಜನರು ಸಾವಿಗೀಡಾಗಿದ್ದ 2020 ರ ಉತ್ತರ ಪಾಕಿಸ್ತಾನದ ನಗರವಾದ ಪೇಶಾವರದಲ್ಲಿ ನಡೆದ ದೊಡ್ಡ ಸ್ಫೋಟ ಸೇರಿದಂತೆ ಈ ಹಿಂದೆ ನಡೆದಿದ್ದ ಹಲವು ದಾಳಿಗಳಲ್ಲಿ ಬದುಕುಳಿದಿದ್ದರು.

ಕಳೆದ ವರ್ಷ ಅಮೆರಿಕ ತನ್ನ ಪಡೆಗಳನ್ನು ಹಿಂತೆಗೆದುಕೊಂಡ ಬಳಿಕ ಹಕ್ಕಾನಿ ಸೇರಿದಂತೆ ಇತರೆಡೆ ಬದಲಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಾದರೆ, ಇಸ್ಲಾಮಿಕ್ ಸ್ಟೇಟ್ ಸಂಘಟನೆ ಭಯೋತ್ಪಾದಕರು ನಿಯಮಿತವಾಗಿ ಧಾರ್ಮಿಕ ಸ್ಥಳ ಮತ್ತು ಜನಾಂಗೀಯ ಅಲ್ಪಸಂಖ್ಯಾತರು ಹಾಗೂ ತಾಲಿಬಾನ್ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT