ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನ ವದಂತಿ ನಡುವೆ ಸಾರ್ವಜನಿಕವಾಗಿ ಕಾಣಿಸಿಕೊಂಡ ತಾಲಿಬಾನ್‌ ಮುಖ್ಯಸ್ಥ ಅಖುಂಜಾದಾ

Last Updated 31 ಅಕ್ಟೋಬರ್ 2021, 13:45 IST
ಅಕ್ಷರ ಗಾತ್ರ

ಕಾಬೂಲ್‌: ತಾಲಿಬಾನ್‌ನ ಸರ್ವೋಚ್ಚ ನಾಯಕ ಹೈಬತುಲ್ಲಾ ಅಖುಂಜಾದಾ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ದಕ್ಷಿಣ ಅಫ್ಗನ್ ನಗರವಾದ ಕಂದಹಾರ್‌ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ.

ಅಖುಂಜಾದಾ ಅವರು 2016 ರಿಂದ ತಾಲಿಬಾನ್‌ ಇಸ್ಲಾಮ್‌ ಚಳವಳಿಯ ಆಧ್ಯಾತ್ಮಿಕ ಮುಖ್ಯಸ್ಥರಾಗಿದ್ದಾರೆ. ಆಗಸ್ಟ್‌ನಲ್ಲಿ ಅಫ್ಗಾನಿಸ್ತಾನವನ್ನು ತಾಲಿಬಾನ್‌ ಪಡೆಗಳು ವಶಪಡಿಸಿಕೊಂಡ ಹೊರತಾಗಿಯೂ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಎಲ್ಲಿಯೂ ಕಾಣಿಸಿಕೊಳ್ಳದ ಅವರ ನಡೆಯಿಂದಾಗಿ ಜಾಗತಿಕವಾಗಿ ಹಲವು ಊಹಾಪೋಹಗಳು ಎದ್ದಿದ್ದವು. ಅದರಲ್ಲಿ ಸಾವಿನ ವದಂತಿಯೂ ಒಂದಾಗಿತ್ತು.

ಶನಿವಾರದಂದು ಅವರು ದಾರುಲ್ ಉಲೂಮ್ ಹಕೀಮಾ ಮದರಸಾಕ್ಕೆ ಭೇಟಿ ನೀಡಿ, ‘ತಾಲಿಬಾನ್‌ ಪಡೆಯ ಸೈನಿಕರು ಮತ್ತು ಶಿಷ್ಯರೊಂದಿಗೆ ಮಾತನಾಡಿದ್ದಾರೆ‘ ಎಂದು ತಾಲಿಬಾನ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಎಷ್ಟರ ಮಟ್ಟಿಗೆ ಎಂದರೆ, ಕಾರ್ಯಕ್ರಮದ ಛಾಯಾಚಿತ್ರಗಳು ಅಥವಾ ವೀಡಿಯೊಗಳೂ ಹೊರಬಾರದಷ್ಟು. ಆದರೆ, ಅಖುಂಜಾದಾ ಅವರು ಮಾತನಾಡಿದ್ದಾರೆ ಎನ್ನಲಾದ ಹತ್ತು ನಿಮಿಷಗಳ ಆಡಿಯೊ ತುಣಕನ್ನು ತಾಲಿಬಾನ್‌ ಸಂಘಟನೆ ಹಂಚಿಕೊಂಡಿದೆ.

‘ಅಮಿರುಲ್ ಮೊಮಿನೀನ್‘ ಅಥವಾ ‘ನಿಷ್ಠಾವಂತ ಕಮಾಂಡರ್’ ಎಂದು ಕರೆಯಲಾಗುವ ಅಖುಂಜಾದಾ ಅವರು ಧಾರ್ಮಿಕ ಸಂದೇಶ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾಷಣದಲ್ಲಿ ರಾಜಕೀಯ ಪ್ರಸ್ತಾಪವಾಗಿಲ್ಲ. ಆದರೆ, ತಾಲಿಬಾನ್ ನಾಯಕತ್ವಕ್ಕೆ ದೇವರ ಆಶೀರ್ವಾದವನ್ನು ಅವರು ಆಶಿಸಿದ್ದಾರೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT