ಶುಕ್ರವಾರ, ಸೆಪ್ಟೆಂಬರ್ 17, 2021
25 °C

ಅಫ್ಗಾನಿಸ್ತಾನದಲ್ಲಿ ಸೇನಾ ಹಸ್ತಕ್ಷೇಪ ಬೇಡ: ಭಾರತಕ್ಕೆ ತಾಲಿಬಾನ್ ಎಚ್ಚರಿಕೆ

ಡೆಕ್ಕನ್ ಹೆರಾಲ್ಡ್ Updated:

ಅಕ್ಷರ ಗಾತ್ರ : | |

ಕಾಬೂಲ್: ಅಫ್ಗಾನಿಸ್ತಾನದಲ್ಲಿ ಭಾರತವು ಮಾನವೀಯ ನೆಲೆಯಲ್ಲಿ ಮಾಡಿರುವ ಕೆಲಸಗಳು ಮತ್ತು ಅಭಿವೃದ್ಧಿ ಕಾರ್ಯದ ಬಗ್ಗೆ ತಾಲಿಬಾನ್ ಮೆಚ್ಚುಗೆ ವ್ಯಕ್ತಪಡಿಸಿದೆ. ಆದರೆ, ಸೇನಾ ಹಸ್ತಕ್ಷೇಪ ಮಾಡದಂತೆ ಎಚ್ಚರಿಕೆ ನೀಡಿದೆ.

‘ಅವರು (ಭಾರತ) ಸೇನೆಯಾಗಿ ಅಫ್ಗಾನಿಸ್ತಾನಕ್ಕೆ ಬಂದರೆ ಹಾಗೂ ಅವರ ಅಸ್ತಿತ್ವವನ್ನು ಪ್ರಕಟಪಡಿಸಿದರೆ ನಾವು ಅವರಿಗೆ ಒಳ್ಳೆಯವರಾಗಿರುವುದಿಲ್ಲ. ಅಫ್ಗಾನಿಸ್ತಾನದಲ್ಲಿ ಇತರ ರಾಷ್ಟ್ರಗಳು ಸೇನಾ ಹಸ್ತಕ್ಷೇಪ ಮಾಡಿದ್ದನ್ನು ಅವರು ನೋಡಿದ್ದಾರೆ. ಹೀಗಾಗಿ ಅದು ಅವರಿಗೆ ಮುಕ್ತ ಆಯ್ಕೆಯಾಗಿರಬಹುದು. ಆಫ್ಗನ್ ಜನರಿಗೆ, ರಾಷ್ಟ್ರೀಯ ಯೋಜನೆಗಳಿಗೆ ಅವರ ನೆರವಿಗೆ ನಮ್ಮ ಮೆಚ್ಚುಗೆಯಿದೆ’ ಎಂದು ತಾಲಿಬಾನ್‌ನ ಕತಾರ್ ಮೂಲದ ವಕ್ತಾರ ಸುಹೈಲ್ ಶಹೀನ್ ‘ಎಎನ್‌ಐ’ಗೆ ತಿಳಿಸಿದ್ದಾನೆ.

ಓದಿ: 

ಓದಿ: 

ಅಫ್ಗಾನಿಸ್ತಾನದ ದಕ್ಷಿಣ ಭಾಗವನ್ನು ದಾಟಿ ಮೂರು ಪ್ರಮುಖ ನಗರಗಳನ್ನು ತಾಲಿಬಾನ್‌ ಶುಕ್ರವಾರ ವಶಪಡಿಸಿಕೊಂಡಿತ್ತು. ಅಫ್ಗಾನಿಸ್ತಾನದ ಶೇ 75 ಭಾಗದ ಮೇಲೆ ತಾಲಿಬಾನ್‌ ಈಗಾಗಲೇ ಹಿಡಿತ ಸಾಧಿಸಿದೆ.

ಈ ಮಧ್ಯೆ, ಅಫ್ಗಾನಿಸ್ತಾನದಲ್ಲಿ ಬಲ ಪ್ರಯೋಗದ ಮೂಲಕ ರಚನೆಯಾಗುವ ಯಾವುದೇ ಸರ್ಕಾರಕ್ಕೆ ಮಾನ್ಯತೆ ನೀಡದಿರಲು ಭಾರತ, ಅಮೆರಿಕ ಹಾಗೂ ಚೀನಾ ಸೇರಿದಂತೆ 12 ರಾಷ್ಟ್ರಗಳು ನಿರ್ಧರಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು