ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರವು: ಗಡುವು ಮೀರಿದರೆ ಎಚ್ಚರ

ಅಮೆರಿಕ, ಬ್ರಿಟನ್‌ಗೆ ತಾಲಿಬಾನ್ ತೀಕ್ಷ್ಣ ಪ್ರತಿಕ್ರಿಯೆ
Last Updated 23 ಆಗಸ್ಟ್ 2021, 22:00 IST
ಅಕ್ಷರ ಗಾತ್ರ

ಲಂಡನ್: ‘ಅಫ್ಗಾನಿಸ್ತಾನ ತೊರೆಯಲು ಮುಂದಾಗಿರುವ ವಿದೇಶಿಯರನ್ನು ತೆರವು ಮಾಡುವ ಕಾರ್ಯಾಚರಣೆಯನ್ನು ಇದೇ 31ರ ನಂತರವೂ ವಿಸ್ತರಿಸಲು ಮುಂದಾದರೆ ಪರಿಣಾಮ ಚೆನ್ನಾಗಿರುವುದಿಲ್ಲ. ವಿಸ್ತರಣೆಗೆ ಮನವಿ ಬಂದರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಬೇಕಾಗುತ್ತದೆ’ ಎಂದು ತಾಲಿಬಾನ್ ಎಚ್ಚರಿಕೆ ನೀಡಿದೆ.

‘ಅಫ್ಗಾನಿಸ್ತಾನದಲ್ಲಿರುವ ಅಮೆರಿಕನ್ನರನ್ನು ಇದೇ 31ರ ಒಳಗೆ ತೆರವು ಮಾಡಲಾಗುತ್ತದೆ. ಬಳಿಕ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲಾಗುವುದು’ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದರು. ಆದರೆ ತೆರವು ಕಾರ್ಯಾಚರಣೆಯನ್ನು ಆಗಸ್ಟ್ 31ರ ಒಳಗೆ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಅಮೆರಿಕದ ರಕ್ಷಣಾ ಸಚಿವಾಲಯ ಹೇಳಿತ್ತು.

ಇದರ ಬೆನ್ನಲ್ಲೇ ತೆರವು ಕಾರ್ಯಾಚರಣೆಯನ್ನು ಮುಂದುವರಿಸಬೇಕು ಎಂದು ಅಮೆರಿಕ ಹೇಳಿತ್ತು. ಬ್ರಿಟನ್ ಮತ್ತು ಫ್ರಾನ್ಸ್‌ ಸಹ ಭಾನುವಾರ ಇದೇ ಮಾತು ಹೇಳಿದ್ದವು. ಅಫ್ಗಾನಿಸ್ತಾನದಲ್ಲಿನ ಪರಿಸ್ಥಿತಿ ಮತ್ತು ತೆರವು ಕಾರ್ಯಾಚರಣೆಯ ಪ್ರಗತಿಯ ಬಗ್ಗೆ ಚರ್ಚಿಸಲು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಜಿ7 ರಾಷ್ಟ್ರಗಳ ತುರ್ತುಸಭೆ ಕರೆದಿದ್ದಾರೆ. ಮಂಗಳವಾರ ಸಭೆ ನಡೆಯಲಿದೆ.

ಅಂಕಿ-ಅಂಶ

15,000:ಅಫ್ಗಾನಿಸ್ತಾನದಲ್ಲಿ ಇನ್ನೂ ಉಳಿದಿರುವ ಅಮೆರಿಕನ್ನರು

60,000:ಅಫ್ಗಾನಿಸ್ತಾನದಲ್ಲಿ ಇನ್ನೂ ಉಳಿದಿರುವ ಅಮೆರಿಕದ ಮಿತ್ರರಾಷ್ಟ್ರಗಳ ಪ್ರಜೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT