ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ವನಿ ಸುರುಳಿಯ ಅನ್ವೇಷಕ ಲಾವೊ ಒಟೆನ್ಸ್‌ ನಿಧನ

Last Updated 12 ಮಾರ್ಚ್ 2021, 19:45 IST
ಅಕ್ಷರ ಗಾತ್ರ

ದ ಹಾಗ್: ಧ್ವನಿಸುರುಳಿಗಳ ಟೇಪ್‌ (ಕ್ಯಾಸೆಟ್‌) ಅನ್ನು ಅನ್ವೇಷಿಸಿದ್ದ ನೆದರ್ಲೆಂಡ್ಸ್‌ನ ಲಾವೊ ಒಟೆನ್ಸ್‌ ಶನಿವಾರ ನಿಧನರಾದರು. ಅವರಿಗೆ 94 ವರ್ಷವಾಗಿತ್ತು. ಫಿಲಿಪ್ಸ್‌ ಕಂಪನಿ ಇದನ್ನು ದೃಢಪಡಿಸಿದೆ. ಕಾಂಪ್ಯಾಕ್ಟ್‌ ಡಿಸ್ಕ್‌ ಅಭಿವೃದ್ಧಿಪಡಿಸಲುಒಟೆನ್ಸ್‌ ಅವರು ಫಿಲಿಪ್ಸ್‌ ಕಂಪನಿಗೆ ನೆರವಾಗಿದ್ದರು.

ಡೆಲ್ಫ್‌ನ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದ ಅವರು 1952ರಲ್ಲಿ ಫಿಲಿಪ್ಸ್‌ ಕಂಪನಿ ಸೇರಿದ್ದರು. ಕಂಪನಿಯ ಉತ್ಪನ್ನಗಳ ಅಭಿವೃದ್ಧಿ ವಿಭಾಗದ ಮುಖ್ಯಸ್ಥರಾಗಿದ್ದು, ಟೇಪ್‌ ರೆಕಾರ್ಡರ್‌ಗೆ ಪರ್ಯಾಯವನ್ನು ಅನ್ವೇಷಿಸಲು ಒತ್ತು ನೀಡಿದ್ದರು.

ಧ್ವನಿ ಸಂಗ್ರಹಣ ಟೇಪ್‌ ಮತ್ತು ಪ್ಲೇಯರ್‌ಗಳು ಸುಲಭವಾಗಿ ಬಳಸುವಂತೆ ಇರಬೇಕು ಮತ್ತು ದೊರೆಯಬೇಕು ಎಂಬುದು ಇವರ ಗುರಿಯಾಗಿತ್ತು. ಧ್ವನಿಸುರುಳಿ ಮತ್ತು ಟೇಪ್‌ ರೆಕಾರ್ಡರ್‌ಗಳು 90ನೇ ದಶಕದ ಅಂತ್ಯದವರೆಗೂ ಅಸಂಖ್ಯ ಸಂಗೀತ ಪ್ರಿಯರು ಹಾಗೂ ಕೇಳುಗರ ಮೆಚ್ಚಿನ ಸಾಧನಗಳಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT