ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಿಂದ ಅಲ್‌ಕೈದಾ ಕೈದಿಗಳು ಪರಾರಿ

Last Updated 15 ಏಪ್ರಿಲ್ 2022, 13:16 IST
ಅಕ್ಷರ ಗಾತ್ರ

ಸನಾ, ಯೆಮನ್‌ (ಎಪಿ): ಯೆಮನ್‌ನ ಪೂರ್ವ ಪ್ರಾಂತ್ಯವಾದ ಹದ್ರಾಮಾತ್‌ನ ಜೈಲಿನಿಂದ 10 ಮಂದಿ ಅಲ್‌ಕೈದಾ ಕೈದಿಗಳು ಪರಾರಿಯಾಗಿದ್ದಾರೆ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.

‘ಗುರುವಾರ ತಡರಾತ್ರಿ ಸೆಯನ್‌ ನಗರದ ಜೈಲಿನಲ್ಲಿ ಅಲ್‌ಕೈದಾ ಕೈದಿಗಳು ತಮ್ಮ ತಮ್ಮಲ್ಲೇ ಜಗಳ ಶುರು ಮಾಡಿಕೊಂಡರು. ಭದ್ರತಾ ಸಿಬ್ಬಂದಿ ಮಧ್ಯೆ ಪ್ರವೇಶಿಸುವಂತೆ ಕೇಳಿಕೊಂಡರು. ಜಗಳ ನಿಲ್ಲಿಸುವಲ್ಲಿ ಭದ್ರತಾ ಸಿಬ್ಬಂದಿ ನಿರತರಾಗಿದ್ದಾಗ, ಕೈದಿಗಳು ಅವರ ಮೇಲೆ ದಾಳಿ ಮಾಡಿ, ಕೈಕಾಲುಗಳನ್ನು ಕಟ್ಟಿ, ರೈಫಲ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆ‘ ಎಂದು ಹೆಸರು ಹೇಳಲಿಚ್ಛಿಸದ ಭದ್ರತಾ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT