ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇವಲ 28 ಗಂಟೆಯಲ್ಲಿ ನಿರ್ಮಾಣವಾಯಿತು 10 ಮಹಡಿಯ ಕಟ್ಟಡ! ವಿಡಿಯೊ ನೋಡಿ

ಚೀನಾದ ಚಂಗ್ಸಾ ಎಂಬಲ್ಲಿ ನಿರ್ಮಾಣ
ಅಕ್ಷರ ಗಾತ್ರ

ಬೆಂಗಳೂರು: ಅಸಾಧ್ಯವಾದದ್ದನ್ನು ಸಾಧ್ಯವಾಗಿಸುವುದು ಚೀನಿಯರ ಹುಟ್ಟುಗುಣ ಎಂಬ ಮಾತೊಂದಿದೆ. ಈ ಮಾತಿಗೆ ಪೂರಕ ಎಂಬಂತೆ ಚೀನಾದ ಗೃಹ ನಿರ್ಮಾಣ ಸಂಸ್ಥೆಯೊಂದು ಕೇವಲ 28 ಗಂಟೆ 45 ನಿಮಿಷದಲ್ಲಿ ಬರೋಬ್ಬರಿ 10 ಮಹಡಿ ಇರುವ ಬೃಹತ್ ವಸತಿ ಕಟ್ಟಡ ನಿರ್ಮಿಸಿ ಇಡೀ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದೆ.

Broad Group ಎನ್ನುವ ಸಂಸ್ಥೆಯೊಂದು ಇದಕ್ಕೆ ಸಂಬಂಧಿಸಿದ ವಿಡಿಯೊತುಣಕನ್ನು ಯುಟ್ಯೂಬ್‌ನಲ್ಲಿ ಹಂಚಿಕೊಂಡಿದ್ದು, ಅತ್ಯಂತ ಕಡಿಮೆ ಸಮಯದಲ್ಲಿ ಮನುಷ್ಯರು ವಾಸಿಸಲು ಯೋಗ್ಯವಾದ 10 ಮಹಡಿ ಕಟ್ಟಡ ನಿರ್ಮಿಸಿರುವುದಾಗಿ ಹೇಳಿಕೊಂಡಿದೆ.

ಚೀನಾದ ಕೇಂದ್ರ ಭಾಗವಾದ ಹುನಾನ್ ಪ್ರಾಂತ್ಯದ ರಾಜಧಾನಿ ಚಂಗ್ಸಾ ಎಂಬಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಸಂಪೂರ್ಣ ಕಾರ್ಖಾನೆ ನಿರ್ಮಿತ ಹಾಗೂ ಸಂಪೂರ್ಣ ತುಕ್ಕುರಹಿತ ಪೈಪ್‌ಗಳಿಂದ ಕಂಟೇನರ್ ಮಾದರಿಯಲ್ಲಿ ಕಟ್ಟಡಗಳನ್ನು (pre-fabricated buildings) ತಯಾರಿಸಲಾಗಿದೆ.

ಕಟ್ಟಡ ಸಲಕರಣೆಗಳನ್ನು ಕ್ರೇನ್‌ಗಳ ಮೂಲಕ ಜೋಡಿಸಲಾಗಿದ್ದು, ನಂತರ ಕಾರ್ಮಿಕರು ಅವುಗಳನ್ನು ಒಂದಕ್ಕೊಂದು ಅಳವಡಿಸಿದ್ದಾರೆ. ಬಳಿಕ ಎಲೆಕ್ಟ್ರಿಕಲ್ ಮತ್ತು ನೀರು ಪೂರೈಕೆಯ ಕೆಲಸವನ್ನು ಮಾಡಿ ಮುಗಿಸಿದ್ದಾರೆ. ಒಟ್ಟಾರೆ ಇದೊಂದುonsite installation ಪ್ರಕ್ರಿಯೆಯಾಗಿದೆ ಎಂದು ಸಂಸ್ಥೆ ಹೇಳಿದೆ.

ಇನ್ನೊಂದು ಆಶ್ಚರ್ಯವೆಂದರೆ, ಈ ಕಟ್ಟಡ ಸಂಪೂರ್ಣ ಭೂಕಂಪ ನಿರೋಧಕವಾಗಿದ್ದು, ಬೇಕಾದಾಗ ಜೋಡಿಸಬಹುದು, ಬೇಡವಾದಾಗ ಬಿಚ್ಚಿ ಇಡಬಹುದು ಮತ್ತು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಬಹುದು ಎಂದು ಸಂಸ್ಥೆ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT