ಸೋಮವಾರ, ಮೇ 23, 2022
30 °C

ಸುಳ್ಳು ಮಾಹಿತಿ: ಬೋರಿಸ್ ಬೇಕರ್‌ಗೆ ಜೈಲು ಶಿಕ್ಷೆ ಸಾಧ್ಯತೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಆಸ್ತಿ ವಿವರ ಮುಚ್ಚಿಟ್ಟು ದಿವಾಳಿಯಾಗಿರುವುದಾಗಿ ಸುಳ್ಳು ಮಾಹಿತಿ ನೀಡಿದ ಮಾಜಿ ಟೆನಿಸ್ ಆಟಗಾರ ಬೋರಿಸ್ ಬೇಕರ್ ತಪ್ಪಿತಸ್ಥರು ಎಂದು ಸಾಬೀತಾಗಿದ್ದು ಕನಿಷ್ಠ ಏಳು ವರ್ಷ ಜೈಲು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ.

ವಿಂಬಲ್ಡನ್‌ನಲ್ಲಿ ಚಾಂಪಿಯನ್ ಆಗಿದ್ದ ಬೇಕರ್ ವಿರುದ್ಧ 2017ರಲ್ಲಿ ದೂರು ದಾಖಲಾಗಿತ್ತು. ವಿಚಾರಣೆ ನಡೆಸಿದ ಲಂಡನ್ ನ್ಯಾಯಾಲಯವು ಅವರು ತಪ್ಪಿತಸ್ಥ ಎಂದು ಘೋಷಿಸಿದೆ. 54 ವರ್ಷದ ಅವರು ವಿಂಬಲ್ಡನ್‌ನಲ್ಲಿ ಗೆದ್ದ ಎರಡು ಟ್ರೋಫಿ ಸೇರಿದಂತೆ ಕೋಟಿಗಟ್ಟಲೆ ಮೌಲ್ಯದ ಆಸ್ತಿಯ ವಿವರ ಬಚ್ಚಿಟ್ಟಿದ್ದರು. ಸಾಲ ಮರುಪಾವತಿ ಮಾಡುವುದನ್ನು ತಪ್ಪಿಸಿಕೊಳ್ಳಲು ಈ ರೀತಿ ಮಾಡಿದ್ದರು.

ಜರ್ಮನಿಯ ಆಟಗಾರ ಬೋರಿಸ್ ಬೇಕರ್ 2012ರಿಂದ ಬ್ರಿಟನ್‌ನಲ್ಲಿ ವಾಸವಾಗಿದ್ದಾರೆ. ಮದುವೆಯ ಉಂಗುರ ಸೇರಿದಂತೆ ಎಲ್ಲ ಆಸ್ತಿಯನ್ನು ಉಳಿಸಲು ಟ್ರಸ್ಟಿಗಳ ಜೊತೆ ಸಹರಿಸಿರುವುದಾಗಿಯೂ ಮ್ಯಾನೇಜರ್‌ಗಳ ಸಲಹೆ ಮೇರೆಗೆ ಎಲ್ಲ ಕಾರ್ಯಗಳನ್ನು ಮಾಡಿರುವುದಾಗಿಯೂ ತಿಳಿಸಿದ್ದಾರೆ. ವಿಶ್ವದ ಅಗ್ರ ಕ್ರಮಾಂಕದ ಆಟಗಾರ ನೊವಾಕ್ ಜೊಕೊವಿಚ್‌ ಅವರಿಗೆ ಸ್ವಲ್ಪ ಕಾಲ ತರಬೇತಿ ನೀಡಿದ್ದ ಬೋರಿಸ್ ಬೇಕರ್ 1999ರಲ್ಲಿ ನಿವೃತ್ತಿ ಹೊಂದಿದ ನಂತರ ಆಸ್ತಿಯಲ್ಲಿ ಗಣನೀಯ ಪ್ರಮಾಣದ ಕೊರತೆಯಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. 

ಆದರೆ ನ್ಯಾಯಾಲಯವು ನಾಲ್ಕು ಪ್ರಕರಣಗಳಲ್ಲಿ ಅವರು ತಪ್ಪಿತಸ್ಥ ಎಂದು ಹೇಳಿದೆ. 20 ಪ್ರಕರಣಗಳಿಂದ ಅವರನ್ನು ಮುಕ್ತಗೊಳಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.