ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ–ಗರ್ಭಪಾತಕ್ಕೆ ಅವಕಾಶ: ಕೆಳ ನ್ಯಾಯಾಲಯದ ಆದೇಶಕ್ಕೆ ‘ಸುಪ್ರೀಂ’ ತಡೆ

Last Updated 2 ಜುಲೈ 2022, 19:23 IST
ಅಕ್ಷರ ಗಾತ್ರ

ಆಸ್ಟಿನ್‌ (ಎಪಿ): ಗರ್ಭ‍ಪಾತ ನಡೆಸಲು ರಾಜ್ಯದಲ್ಲಿನ ಕ್ಲಿನಿಕ್‌ಗಳಿಗೆ ಅವಕಾಶ ನೀಡುವ ಬಗ್ಗೆ ಕೆಳ ಹಂತದ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಅಮೆರಿಕದ ಟೆಕ್ಸಾಸ್‌ ಸುಪ್ರೀಂಕೋರ್ಟ್‌ ತಡೆಹಿಡಿದಿದೆ. ಪ್ರಕರಣದ ವಿಚಾರಣೆಯನ್ನು ಈ ತಿಂಗಳ ಅಂತ್ಯಕ್ಕೆ ಮುಂದೂಡಿದೆ.

1973ರಲ್ಲಿ, ರೋ ಮತ್ತು ವೇಡ್ ನಡುವಣ ಪ್ರಕರಣದ ವಿಚಾರಣೆ ನಡೆಸಿದ್ದ ಅಮೆರಿಕದ ಸುಪ್ರೀಂಕೋರ್ಟ್‌ ಗರ್ಭಪಾತಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿತ್ತು. ಇದೇ ಜೂನ್ 24 ರಂದು ಸುಪ್ರೀಂಕೋರ್ಟ್‌ನ ನ್ಯಾಯಪೀಠವೊಂದು ಗರ್ಭಪಾತ ನಿಷೇಧದ ಪರವಾಗಿ ತೀರ್ಪು ಪ್ರಕಟಿಸಿತ್ತು. ಇದಾದ ನಂತರವೂ ಟೆಕ್ಸಾಸ್‌ನ ಕೆಳ ಹಂತದ ನ್ಯಾಯಾಲಯವು ಗರ್ಭ‍ಪಾತ ನಡೆಸಲು ರಾಜ್ಯದಲ್ಲಿನ ಕ್ಲಿನಿಕ್‌ಗಳಿಗೆ ಅವಕಾಶ ನೀಡಿತ್ತು.

ಟೆಕ್ಸಾಸ್‌ ಸುಪ್ರೀಂಕೋರ್ಟ್‌ನ ತೀರ್ಪು ಹೊರಬಿದ್ದ ಬಳಿಕ ಸ್ಥಳೀಯ ಕ್ಲಿನಿಕ್‌ಗಳು ಗರ್ಭಪಾತ ಮಾಡುವುದನ್ನು ನಿಲ್ಲಿಸಿದ್ದು, ‘ಅಪಾಯಿಂಟ್‌ಮೆಂಟ್‌’ಗಳನ್ನೂ ರದ್ದು ಮಾಡುತ್ತಿವೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT