ಬ್ಯಾಂಕಾಕ್: ಮುಖಕ್ಕೆ ಮಾಸ್ಕ್ ಧರಿಸದ ಥಾಯ್ಲೆಂಡ್ ಪ್ರಧಾನಿ ಪ್ರಯುಥ್ ಚಾನ್–ಒಚಾ ಅವರಿಗೆ ಸೋಮವಾರ 190 ಡಾಲರ್ (₹14,223) ದಂಡ ವಿಧಿಸಲಾಗಿದೆ.
ಸಭೆಯೊಂದರಲ್ಲಿ ಮಾಸ್ಕ್ ಧರಿಸದೆ ಒಚಾ ಅವರು ಭಾಗವಹಿಸಿದ್ದ ಚಿತ್ರವನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಈ ಚಿತ್ರವನ್ನು ಆಧರಿಸಿ ದಂಡ ವಿಧಿಸಲಾಗಿದೆ. ಬಳಿಕ ಈ ಚಿತ್ರವನ್ನು ತೆಗೆದುಹಾಕಲಾಗಿದೆ.
‘ಮಾಸ್ಕ್ ಧರಿಸದೆ ಇರುವುದು ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ನಾನು ಪ್ರಧಾನಿ ಅವರಿಗೆ ತಿಳಿಸಿದೆ’ ಎಂದು ಬ್ಯಾಂಕಾಕ್ ರಾಜ್ಯಪಾಲ ಅಶ್ವಿನ್ ಕ್ವನ್ಮುಂಗ್ ತಿಳಿಸಿದ್ದಾರೆ.