ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ ವಿರುದ್ಧದ ದಾಳಿಯಲ್ಲಿ ಮೇಲುಗೈ ಸಾಧಿಸುತ್ತಿರುವ ರಷ್ಯಾ: ತಜ್ಞರ ಅಭಿಮತ

Last Updated 13 ಜೂನ್ 2022, 13:59 IST
ಅಕ್ಷರ ಗಾತ್ರ

ಕೀವ್‌ (ಎಪಿ): ಉಕ್ರೇನ್‌ನ ಪ್ರಮುಖ ಕೈಗಾರಿಕಾ ನಗರವಾಗಿರುವ ಡಾನ್‌ಬಾಸ್‌ ಮೇಲೆ ನಿರಂತರ ದಾಳಿ ನಡೆಸುತ್ತಿರುವ ರಷ್ಯಾ ನಿಧಾನವಾಗಿ ಅದನ್ನು ತನ್ನ ವಶಕ್ಕೆ ಪಡೆಯುವ ಸನಿಹದಲ್ಲಿದೆ. ನಾಲ್ಕನೇ ತಿಂಗಳಿಗೆ ವಿಸ್ತರಣೆಗೊಂಡಿರುವ ಯುದ್ಧದಲ್ಲಿ ರಷ್ಯಾಕ್ಕೆ ಲಭಿಸಿದ ಮಹತ್ವದ ಹಿಡಿತ ಇದು ಎಂದು ರಷ್ಯಾ ಸೇನೆಯ ಬಗ್ಗೆ ತಿಳಿದುಕೊಂಡಿರುವ ತಜ್ಞರು ಹೇಳಿದ್ದಾರೆ.

ಡಾನ್‌ಬಸ್‌ ನಗರ ಉಕ್ರೇನ್‌ನ ಕೈಬಿಟ್ಟು ಹೋದರೆ ಇದು ರಷ್ಯಾಕ್ಕೆ ದೊರೆತ ಬಹುದೊಡ್ಡ ವಿಜಯ ಮಾತ್ರವಲ್ಲ, ಉಕ್ರೇನ್‌ನ ಸೇನಾ ಶಕ್ತಿಯೇ ಕುಸಿಯುವಂತಹ ಬೆಳವಣಿಗೆಯಾಗಲಿದೆ. ಕೀವ್‌ ನಗರವನ್ನು ಸಹ ತನ್ನ ವಶಕ್ಕೆ ಪಡೆಯುವುದಕ್ಕೆ ರಷ್ಯಾಕ್ಕೆ ಇದು ದಾರಿ ಮಾಡಿಕೊಡಲಿದೆ ಎಂದು ಲಂಡನ್‌ನ ಚತಂ ಹೌಸ್‌ನ ರಷ್ಯಾ ಸೇನಾ ತಜ್ಞ ಕೈರ್‌ ಗಿಲ್ಸ್‌ ಅಭಿಪ್ರಾಯಪಟ್ಟಿದ್ದಾರೆ.

ಯುದ್ಧದ ಆರಂಭದಲ್ಲಿ ಸೂಕ್ತ ಯೋಜನೆ ಮತ್ತು ಸಮನ್ವಯವಿಲ್ಲದೆ ಉಕ್ರೇನ್‌ ರಾಜಧಾನಿ ಕೀವ್‌ ಮತ್ತು ಎರಡನೇ ಅತಿ ದೊಡ್ಡ ನಗರ ಹಾರ್ಕಿವ್‌ನಲ್ಲಿ ರಷ್ಯಾ ಹಿನ್ನಡೆ ಅನುಭವಿಸಿತು. ಬಳಿಕ ಡಾನ್‌ಬಾಸ್‌ನತ್ತ ತನ್ನ ಗಮನ ಕೇಂದ್ರೀಕರಿಸಿತು. ಮೊದಲ ತಪ್ಪುಗಳಿಂದ ಪಾಠ ಕಲಿತ ರಷ್ಯಾ ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿತು. ಹೀಗಾಗಿ ಡಾನ್‌ಬಾಸ್‌ ಪ್ರದೇಶದಲ್ಲಿ ಉಕ್ರೇನ್‌ ಪಡೆಯನ್ನು ಮಣಿಸುತ್ತ ರಷ್ಯಾ ಮೇಲುಗೈ ಸಾಧಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಉಕ್ರೇನ್‌ ಜನರಿಗೆ ರಷ್ಯಾ ಪಾಸ್ಪೋರ್ಟ್‌ ವಿತರಣೆ:ಭಾನುವಾರದಕ್ಷಿಣ ಉಕ್ರೇನ್‌ ಪ್ರದೇಶದಲ್ಲಿ ರಷ್ಯಾ ಅಧಿಕಾರಿಗಳು ‘ರಷ್ಯಾ ದಿನ’ವನ್ನು ಆಚರಿಸಿದರು. ಬಳಿಕ ಅಲ್ಲಿನ ನಿವಾಸಿಗಳಿಗೆ ರಷ್ಯಾ ಪಾಸ್‌ಪೋರ್ಟ್‌ ವಿತರಿಸಿದರು. ಮರಿಯುಪೊಲ್‌, ಜಪೋರಿಝಝಿಯಾ ಪ್ರದೇಶದಲ್ಲಿ ರಷ್ಯಾ ಅಧಿಕಾರಿಗಳು ರಷ್ಯಾ ಧ್ವಜವನ್ನು ಹಾರಿಸಿ ಸಂಭ್ರಮಾಚರಿಸಿದರು. ನಂತರ ರಷ್ಯಾ ಪೌರತ್ವ ಬಯಸಿ ಅರ್ಜಿ ಸಲ್ಲಿಸಿದ್ದ ಜನರಿಗೆ ಪಾಸ್‌ಪೋರ್ಟ್ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT