ಶನಿವಾರ, ಮೇ 15, 2021
25 °C

ಫಿಲಿಪೈನ್ಸ್: ಕಾಲುವೆಗೆ ಉರುಳಿಬಿದ್ದ ಎಸ್‌ಯುವಿ, 7 ಮಕ್ಕಳು ಸೇರಿ 13 ಜನರ ಸಾವು

ಎಪಿ Updated:

ಅಕ್ಷರ ಗಾತ್ರ : | |

Prajavani

ಮನಿಲಾ (ಫಿಲಿಪೈನ್ಸ್): ಉತ್ತರ ಫಿಲಿಪೈನ್ಸ್‌ನ ನೀರಾವರಿ ಕಾಲುವೆಗೆ ಎಸ್‌ಯುವಿ ಉರುಳಿಬಿದ್ದ ಪರಿಣಾಮ 13 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

15 ಜನರಿಂದ ಕಿಕ್ಕಿರಿದು ತುಂಬಿದ್ದ ವಾಹನದಲ್ಲಿ ಪ್ರಯಾಣ ಬೆಳೆಸಿದ್ದವರ ಪೈಕಿ ಇಬ್ಬರು ಮಾತ್ರ ಸಣ್ಣ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಮೃತರಲ್ಲಿ ಚಾಲಕ, ಏಳು ಮಕ್ಕಳು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳಿಂಗ ಪ್ರಾಂತ್ಯದ ತಬೂಕ್ ನಗರದಲ್ಲಿ ಸ್ಥಳೀಯವಾಗಿ ಜನಪ್ರಿಯವಾದ ಸರೋವರಕ್ಕೆ ತೆರಳುತ್ತಿದ್ದ ಸಂದರ್ಭ ಭಾನುವಾರ ಮಧ್ಯಾಹ್ನ ಈ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಎಸ್‌ಯುವಿ ಚಾಲಕ ಸೋಯಾ ಲೋಪ್ ಆಗ್ಟುಲಾವ್ ಇದ್ದಕ್ಕಿದ್ದಂತೆ ವಾಹನದ ನಿಯಂತ್ರಣ ಕಳೆದುಕೊಂಡಿದ್ದರು. ಹಾಗಾಗಿ, ವಾಹನವು ರಸ್ತೆ ಬಿಟ್ಟು ಕಾಲುವೆಗ ಕಡೆಗೆ ನುಗ್ಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಅಪಘಾತದ ಬಳಿಕ, ಗ್ರಾಮಸ್ಥರು ಮತ್ತು ಪೊಲೀಸರು ಸಂತ್ರಸ್ತರನ್ನು ಕಳಿಂಗದ ಎರಡು ಆಸ್ಪತ್ರೆಗಳಿಗೆ ಕರೆತಂದಿದ್ದಾರೆ.

ಪರ್ವತಶ್ರೇಣಿಯಿಂದ ಕೂಡಿದ ಫಿಲಿಪೈನ್ಸ್ ದೇಶದ ಉತ್ತರ ಭಾಗದ ಪ್ರದೇಶಗಳು ಶಿಥಿಲಗೊಂಡ ಕಳಪೆ ರಸ್ತೆಗಳು, ಸೂಕ್ತ ರಸ್ತೆ ಸುರಕ್ಷತಾ ಸಂಕೇತಗಳು ಮತ್ತು ಸಾರಿಗೆ ನಿಯಮಗಳ ವ್ಯವಸ್ಥೆ ಇಲ್ಲದೆ ಮಾರಣಾಂತಿಕ ರಸ್ತೆ ಅಪಘಾತಗಳಿಗೆ ಕುಖ್ಯಾತಿ ಪಡೆದಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು