ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್‌ ಸೈನಿಕರ ಗುಂಡೇಟಿಗೆ ಮೂವರು ಪ್ಯಾಲೆಸ್ಟೀನಿಯರು ಹತ

Last Updated 9 ಮಾರ್ಚ್ 2023, 11:38 IST
ಅಕ್ಷರ ಗಾತ್ರ

ನಾಬ್ಲಸ್ (ಪ್ಯಾಲೆಸ್ಟೀನ್): ಇಸ್ರೇಲ್ ಆಕ್ರಮಿತ ಪ್ಯಾಲೆಸ್ಟೀನ್‌ನ ಪಶ್ಚಿಮ ಗಡಿಯಲ್ಲಿ ಇಸ್ರೇಲ್‌ ಸೈನಿಕರು ಗುಂಡಿಕ್ಕಿ ಮೂವರು ಪ್ಯಾಲೆಸ್ಟೀನಿಯರನ್ನು ಗುರುವಾರ ಕೊಂದಿದ್ದಾರೆ ಎಂದು ಪ್ಯಾಲೆಸ್ಟೀನ್ ಆರೋಗ್ಯ ಸಚಿವಾಲಯ ತಿಳಿಸಿದೆ.

ಫಟನೆಯಲ್ಲಿ ಮೃತರಾದವರು ಸುಫ್ಯಾನ್ ಫಖೌರಿ (26), ಅಹಮ್ಮದ್ ಫಶಾಫ್‌ಶಾ(22) ಮತ್ತು ನಯೆಫ್ ಮಲೈಶಾ(25) ಎಂದು ಪ್ಯಾಲೆಸ್ಟೀನ್ ಸಚಿವಾಲಯ ಗುರುತಿಸಿದ್ದು ಮೃತರ ಹಿನ್ನೆಲೆಯನ್ನು ಬಹಿರಂಗಪಡಿಸಿಲ್ಲ.

ಈ ಘಟನೆ ಸಂಬಂಧ ಇಸ್ರೇಲ್ ತನ್ನ ಸೈನ್ಯದ ನಡೆಯನ್ನು ಸಮರ್ಥಿಸಿಕೊಂಡಿದೆ. ‘ಜಾಬ ಪ್ರದೇಶದಲ್ಲಿ ವಿಶೇಷ ಸೇನಾ ಪಡೆ ಕಾರ್ಯಾಚರಣೆಯಲ್ಲಿದ್ದಾಗ ಮೂವರು ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರು. ಅವರು ನಮ್ಮ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಕ್ಕೆ ಪ್ರತಿ ದಾಳಿ ಮಾಡಿದೆವು. ಹತರಾದವರು ಇಸ್ಲಾಮಿಕ್ ಜಿಹಾದಿ ಉಗ್ರ ಸಂಘಟನೆಯ ಸದಸ್ಯರಾಗಿದ್ದಾರೆ‘ ಎಂದು ಇಸ್ರೇಲ್ ಸೇನಾಪಡೆ ತಿಳಿಸಿದೆ.

‘ಈ ಕಾರ್ಯಾಚರಣೆಯ ವೇಳೆ ಮೂವರು ಶಸ್ತ್ರಧಾರಿ ಪ್ಯಾಲೆಸ್ಟೀನಿಯರು ಸ್ಫೋಟಕ ತುಂಬಿದ್ದ ಕಾರ್‌ನಲ್ಲಿದ್ದರು‘ ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT