ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬೈ ಎಕ್ಸ್‌ಪೊ: ನಿರ್ಮಾಣ ಕಾರ್ಯದಲ್ಲಿದ್ದ ಮೂವರು ಕಾರ್ಮಿಕರು ಸಾವು

70ಕ್ಕೂ ಹೆಚ್ಚು ಜನರಿಗೆ ಗಾಯ
Last Updated 3 ಅಕ್ಟೋಬರ್ 2021, 7:20 IST
ಅಕ್ಷರ ಗಾತ್ರ

ದುಬೈ: 'ದುಬೈ ಎಕ್ಸ್‌ಪೊ 2020' ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರ ಪೈಕಿ ಮೂವರು ಮೃತಪಟ್ಟಿದ್ದು, 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ಮಾನವ ಹಕ್ಕುಗಳ ಕುರಿತ ದಾಖಲೆಗಳು ಹಾಗೂ ವಲಸೆ ಕಾರ್ಮಿಕರನ್ನು ಅಮಾನವೀಯ ರೀತಿಯಲ್ಲಿ ನಡೆಸಿಕೊಳ್ಳುತ್ತಿರುವ ಬಗ್ಗೆ ಟೀಕಿಸಿರುವ ಯುರೋಪಿಯನ್‌ ಪಾರ್ಲಿಮೆಂಟ್‌, ಆರು ತಿಂಗಳ ವಿಶ್ವಮಟ್ಟದ ದುಬೈ ಮೇಳವನ್ನು ಬಹಿಷ್ಕರಿಸಲು ಕರೆ ನೀಡಿದೆ. ಅದರ ಬೆನ್ನಲ್ಲೇ ಕಾರ್ಮಿಕರ ಸಾವಿನ ವಿಚಾರ ಹೊರಬಂದಿದೆ.

ದುಬೈನ ಹೊರಭಾಗದಲ್ಲಿ 2,00,000ಕ್ಕೂ ಹೆಚ್ಚು ಕಾರ್ಮಿಕರು ಬೃಹತ್‌ ನಿರ್ಮಾಣ ಕಾರ್ಯ ನಡೆಸಿದ್ದು, ಎಕ್ಸ್‌ಪೊ ಜಾಗವು ಮೊನಾಕೊ ಎರಡರಷ್ಟು ದೊಡ್ಡದಾಗಿದೆ ಹಾಗೂ ನೂರಾರು ಮಳಿಗೆಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ರೂಪಿಸಲಾಗಿದೆ. ವಿಶ್ವ ದರ್ಜೆಯ ಗುಣಮಟ್ಟ ಅಳವಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ನಿರ್ಮಾಣ ಕಾರ್ಯಗಳಲ್ಲಿ ಮೂರು ಮಂದಿ ಸಾವಿಗೀಡಾಗಿದ್ದಾರೆ ಹಾಗೂ 72 ಮಂದಿಗೆ ಗಂಭೀರ ಗಾಯಗಳಾಗಿವೆ' ಎಂದು ಎಕ್ಸ್‌ಪೊ ಪ್ರಕಟಣೆಯಲ್ಲಿ ತಿಳಿಸಿದೆ.

ಎಕ್ಸ್‌ಪೊ ಸ್ಥಳದಲ್ಲಿ 247 ದಶಲಕ್ಷ ಗಂಟೆಗಳ ಕೆಲಸ ಪೂರ್ಣಗೊಳಿಸಲಾಗಿದೆ ಹಾಗೂ ಅ‍ವಘಡದ ಪ್ರಮಾಣವು ಬ್ರಿಟನ್‌ಗಿಂತಲೂ ಕಡಿಮೆ ಇರುವುದಾಗಿ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT