ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ವಿಮಾನ ನಿಲ್ದಾಣದ ರನ್‌ವೇನಲ್ಲಿ ಹೊತ್ತಿ ಉರಿದ ಟಿಬೆಟ್ ಏರ್‌ಲೈನ್ಸ್‌ ವಿಮಾನ

Last Updated 12 ಮೇ 2022, 3:25 IST
ಅಕ್ಷರ ಗಾತ್ರ

ಬಿಜಿಂಗ್: ಚೀನಾಕ್ಕೆ ಸೇರಿದ ಚೋಂಗ್‌ಕಿಂಗ್ ಜಿಂಗ್ ಬಿ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗಿನ ಜಾವ ಟಿಬೆಟ್‌ ಏರ್‌ಲೈನ್ಸ್‌ನ ವಿಮಾನವೊಂದು ಟೇಕ್‌ ಆಫ್ ಆಗುವ ವೇಳೆ ರನ್‌ವೇನಲ್ಲಿ ಹೊತ್ತಿ ಉರಿದಿರುವ ಘಟನೆ ನಡೆದಿದೆ.

ಈ ವಿಮಾನದಲ್ಲಿ 113 ಪ್ರಯಾಣಿಕರು ಹಾಗೂ 9 ಜನ ಸಿಬ್ಬಂದಿ ಇದ್ದರು. ಯಾವುದೇ ಪ್ರಾಣಾಪಾಯ ಆಗಿಲ್ಲ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಏರ್‌ಬಸ್‌ ಎ319 ಹೆಸರಿನ ಈ ವಿಮಾನಚೋಂಗ್‌ಕಿಂಗ್‌ನಿಂದ ಟಿಬೆಟ್‌ನ ರಾಜಧಾನಿ ಲ್ಹಾಸಾಗೆ ತೆರಳುತಿತ್ತು. ದುರ್ಘಟನೆಯ ವಿಡಿಯೊ ವಿಮಾನ ನಿಲ್ದಾಣದ ಸಿಸಿಟಿವಿಯಲ್ಲಿ ದಾಖಲಾಗಿದೆ.

ಕಳೆದ ತಿಂಗಳಷ್ಟೇ ಚೀನಾದ ‘ಚೀನಾ ಈಸ್ಟರ್ನ್‌ ಏಲ್‌ಲೈನ್ಸ್‌’ ವಿಮಾನವೊಂದು ಗುಡ್ಡಗಾಡು ಪ್ರದೇಶದಲ್ಲಿ ಅಪಘಾತಕ್ಕೆ ಈಡಾಗಿ 132 ಜನ ಮೃತಪಟ್ಟಿದ್ದರು. ವಿಚಿತ್ರವೆಂದರೆ ಈ ದುರಂತಕ್ಕೆ ಇದುವರೆಗೆ ಅಧಿಕೃತ ಕಾರಣಗಳು ತಿಳಿದು ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT