ಬುಧವಾರ, ಮೇ 25, 2022
28 °C

ತಾಯಿ ಮೊಬೈಲ್‌ನಿಂದ ₹1.44 ಲಕ್ಷ ಮೌಲ್ಯದ ಪಿಠೋಪಕರಣ ಆರ್ಡರ್ ಮಾಡಿದ 22 ತಿಂಗಳ ಮಗು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಜೆರ್ಸಿ: 22 ತಿಂಗಳ ಮಗುವೊಂದು ತನ್ನ ತಾಯಿಯ ಮೊಬೈಲ್‌ನಿಂದ ಸುಮಾರು ₹1.44 ಲಕ್ಷ ಮೌಲ್ಯದ ಪಿಠೋಪಕರಣಗಳನ್ನು  ಆನ್‌ಲೈನ್‌ ಆರ್ಡರ್ ಮಾಡಿರುವ ಘಟನೆ ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದಿರುವುದು ವರದಿಯಾಗಿದೆ.

ಆಯನ್‌ಕುಮಾರ್ ಎನ್ನುವ ಮಗುವೊಂದು ವಾಲ್‌ಮಾರ್ಟ್‌ ವೆಬ್‌ಸೈಟ್‌ನಿಂದ ಪಿಠೋಪಕರಣಗಳನ್ನು ಆರ್ಡರ್ ಮಾಡಿದೆ.

ತನ್ನ ತಾಯಿ ಬಳಿ ಇದ್ದ ಮೊಬೈಲ್ ತೆಗೆದುಕೊಂಡು ಈ ರೀತಿಯಾಗಿ ಮಗು ಮಾಡಿರುವುದು ಆಕಸ್ಮಿಕವಾಗಿ ನಡೆದಿದೆ. ಪಿಠೋಪಕರಣಗಳು ಮನೆಗೆ ಡೆಲಿವರಿ ಬಂದ ಮೇಲೆಯೇ ಇದು ತಮಗೆ ಗೊತ್ತಾಗಿದ್ದು ಎಂದು ಮಗುವಿನ ತಾಯಿ ಮಧು ಹೇಳಿದ್ದಾರೆ.

ಮಕ್ಕಳ ಕೈಗೆ ಮೊಬೈಲ್ ಫೋನ್ ಕೊಡುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದು ಮಗುವಿನ ತಂದೆ ಪ್ರಮೋದ್ ಕುಮಾರ್ ಹೇಳಿರುವುದಾಗಿ ಎನ್‌ಬಿಸಿ ವಾಹಿನಿ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು