ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಭಾರತ ಮೂಲದ ನಿಕ್ಕಿ ಹ್ಯಾಲೆ ಸ್ಪರ್ಧೆ ಸಂಭವ

Last Updated 1 ಫೆಬ್ರುವರಿ 2023, 10:24 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಅಮೆರಿಕನ್ ರಿಪಬ್ಲಿಕನ್ ಪಕ್ಷದ ನಾಯಕಿ ಭಾರತ ಮೂಲದ ನಿಕ್ಕಿ ಹ್ಯಾಲೆ ಅವರು ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದ್ದು, ಈ ಕುರಿತು ಇದೇ 15ರಂದು ನಿರ್ಧಾರ ಪ್ರಕಟಿಸಲಿದ್ದಾರೆ.

ಒಂದು ವೇಳೆ ನಿಕ್ಕಿ ಹ್ಯಾಲೆ ಅವರು ಸ್ಪರ್ಧೆಗೆ ಇಳಿದದ್ದೇ ಆದರೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರಿಗೆ ನಿಕ್ಕಿ ಅವರು ಮೊದಲ ಎದುರಾಳಿಯಾಗುವ ಸಾಧ್ಯತೆ ಇದೆ.

51 ವರ್ಷದ ನಿಕ್ಕಿ ಹ್ಯಾಲೆ ಅವರು ಸೌತ್‌ ಕೆರೊಲಿನಾಕ್ಕೆ ಎರಡು ಬಾರಿ ಗವರ್ನರ್‌ ಆಗಿದ್ದರು. ಅಲ್ಲದೆ, ವಿಶ್ವಸಂಸ್ಥೆಗೆ ಅಮೆರಿಕದ ಮಾಜಿ ರಾಯಭಾರಿಯೂ ಆಗಿದ್ದರು.

‘ನಿಕ್ಕಿ ಅವರು ತಮ್ಮ ಯೋಜನೆಗಳ ಕುರಿತು ಸೂಚಿಸುವ ವಿಡಿಯೊವೊಂದನ್ನು ಈ ವಾರ ಬಿಡುಗಡೆ ಮಾಡಬಹುದು’ ಎಂದು ‘ವಾಷಿಂಗ್ಟನ್‌ ಪೋಸ್ಟ್‌’ ವರದಿ ಮಾಡಿದೆ.

ಮುಂಬರಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಭಾಗವಹಿಸುವುದಾಗಿ ಟ್ರಂಪ್‌ ಅವರು ಕಳೆದ ವರ್ಷವೇ ಘೋಷಿಸಿದ್ದರು.

ನಿಕ್ಕಿ ಅವರ ಬಾಲ್ಯದ ಹೆಸರು ನಿಮ್ರತಾ ರಾಂಧವ. ಅವರ ತಂದೆ ಅಜಿತ್‌ ಸಿಂಗ್‌ ರಾಂಧವ ಪಂಜಾಬ್‌ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದರು. ಅವರ ತಾಯಿ ರಾಜ್‌ ಕೌರ್‌ ರಾಂಧವರ ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದರು. ದಂಪತಿ ಮೊದಲಿಗೆ ಕೆನಡಕ್ಕೆ ವಲಸೆ ಹೋಗಿ, 1960ರ ದಶಕದಲ್ಲಿ ಅಮೆರಿಕಕ್ಕೆ ಬಂದು ನೆಲೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT