ಗುರುವಾರ , ಡಿಸೆಂಬರ್ 3, 2020
23 °C

ನ.3ರ ಚುನಾವಣೆ ಸುರಕ್ಷಿತವಾಗಿ ನಡೆದಿದೆ: ಅಮೆರಿಕ ಚುನಾವಣಾಧಿಕಾರಿಗಳ ಹೇಳಿಕೆ

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದ ಇತಿಹಾಸದಲ್ಲೇ ನವೆಂಬರ್ 3ರ ಅಧ್ಯಕ್ಷೀಯ ಚುನಾವಣೆ ಅತ್ಯಂತ ಸುರಕ್ಷಿತವಾಗಿ ನಡೆದಿದೆ ಎಂದು ಅಮೆರಿಕದ ಚುನಾವಣೆ ನಡೆಸುವ ಅಧಿಕಾರಿಗಳು ಮತ್ತು ತಂತ್ರಜ್ಞಾನ ಸಂಸ್ಥೆಗಳೂ ಹೇಳಿವೆ.

ಸೈಬರ್‌ ಸೆಕ್ಯುರಿಟಿ ಮತ್ತು ಇನ್ಫ್ರಾಸ್ಟ್ರಕ್ಚರ್‌ ಸೆಕ್ಯುರಿಟಿ ಏಜೆನ್ಸಿಗಳು ಸೇರಿದಂತೆ, ಅಮೆರಿಕದ ಚುನಾವಣೆ ನಡೆಸಿರುವ ಅಧಿಕಾರಿಗಳು ಈ ಸ್ಪಷ್ಟನಾ ಹೇಳಿಕೆಯನ್ನು ಎಲ್ಲ ಮಾಧ್ಯಮ ಸಂಸ್ಥೆಗಳಿಗೂ ಇಮೇಲ್ ಮೂಲಕ ತಲುಪಿಸಿವೆ.

ಇದನ್ನೂ ಓದಿ: 

‘ಮತದಾನದ ವೇಳೆ ಎಲ್ಲೂ ಮತಗಳನ್ನು ತೆಗೆದು ಹಾಕಿರುವ, ಕಳವು ಮಾಡಿರುವ ಅಥವಾ ಬದಲಾಯಿಸಿರುವ ಕುರಿತು ಸಾಕ್ಷ್ಯಗಳಿಲ್ಲ. ಇಂಥ  ಕೃತ್ಯಗಳಿಗೆ ನೆರವಾಗಿದ್ದಾರೆ ಎಂಬುದಕ್ಕೆ ಪುರಾವೆಗಳೂ ಇಲ್ಲ‘ ಎಂದು ಸಂಸ್ಥೆಗಳು ಹೇಳಿಕೆಯಲ್ಲಿ ತಿಳಿಸಿವೆ.

ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ಚುನಾವಣೆಯಲ್ಲಿ ಅಕ್ರಮ ನಡೆದಿದೆ‘ ಎಂಬ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು