ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ದಿನಗಳ ಬಳಿಕ 800 ಪ್ರಯಾಣಿಕರಿದ್ದ ಹಡಗು ಸುರಕ್ಷಿತ ತಾಣಕ್ಕೆ

Last Updated 19 ಮೇ 2022, 15:41 IST
ಅಕ್ಷರ ಗಾತ್ರ

ಲೆಂಬಟಾ ದ್ವೀಪ, ಇಂಡೊನೇಷ್ಯಾ(ಎಎಫ್‌ಪಿ): 800ಕ್ಕೂ ಹೆಚ್ಚು ಮಂದಿಯನ್ನು ಹೊತ್ತೊಯ್ಯುವಾಗ ಮಾರ್ಗಮಧ್ಯೆ ಹಾದಿ ತಪ್ಪಿ ಸಮುದ್ರದ ಮಧ್ಯೆ ಸಿಲುಕಿಕೊಂಡಿದ್ದ ಇಂಡೊನೇಷ್ಯಾದ ಹಡಗನ್ನು ಗುರುವಾರ ಸುರಕ್ಷಿತವಾಗಿ ದಡಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

784 ಪ್ರಯಾಣಿಕರು ಮತ್ತು 55 ಸಿಬ್ಬಂದಿ ಇದ್ದ ಹಡಗು ಮಂಗಳವಾರ ಪೂರ್ವ ನುಸಾ ಟೆಂಗ್ಗರಾ ಪ್ರಾಂತ್ಯದ ನಡು ನೀರಿನಲ್ಲಿ ಸಿಲುಕಿಕೊಂಡಿತ್ತು. ಈ ಹಡಗಿನ ನೆರವಿಗಾಗಿ ರವಾನಿಸಲಾದ ಸರ್ಕಾರಿ ಸ್ವಾಮ್ಯದ ಪಿಟಿ ಪೆಲ್ನಿ ಕಂಪನಿಯ ಟಗ್ ಬೋಟ್ ನೀರಿನಲ್ಲಿ ಸಿಲುಕಿದ್ದ ಪ್ರಯಾಣಿಕರ ಹಡಗನ್ನು ಸುರಕ್ಷಿತ ತಾಣಕ್ಕೆ ತಂದಿದೆ. ಹಡಗಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಸ್ಥಳೀಯ ನೌಕಾಪಡೆಯ ಮುಖ್ಯಸ್ಥ ದ್ವಿ ಯೋಗಾ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT