ಗುರುವಾರ , ಅಕ್ಟೋಬರ್ 1, 2020
27 °C

ಆಗಸ್ಟ್ 15ರಂದು ಅಮೆರಿಕದ ಟೈಮ್ಸ್ ಸ್ಕ್ವೇರ್‌ನಲ್ಲಿ ಭಾರತೀಯರಿಂದ ಧ್ವಜಾರೋಹಣ

ಪಿಟಿಐ Updated:

ಅಕ್ಷರ ಗಾತ್ರ : | |

Indian Flag

ನ್ಯೂಯಾರ್ಕ್: ಆಗಸ್ಟ್  15ರಂದು ಅಮೆರಿಕದಲ್ಲಿರುವ ಭಾರತ ಮೂಲದ ಜನರ ಪ್ರಮುಖ ಗುಂಪೊಂದು ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಲಿದೆ.

ನ್ಯೂಯಾರ್ಕ್, ನ್ಯೂಜೆರ್ಸಿ ಮತ್ತು ಕನೆಕ್ಟಿಕಟ್ ಈ ಮೂರು ಪ್ರದೇಶದ ಫೆಡರೇಷನ್ ಆಫ್ ಇಂಡಿಯನ್ ಅಸೋಸಿಯೇಷನ್ ಈ ಬಗ್ಗೆ ಮಾಹಿತಿ ನೀಡಿದ್ದು,  ಟೈಮ್ಸ್ ಸ್ವೇರ್‌ನಲ್ಲಿ ಧ್ವಜಾರೋಹಣ ಮಾಡುವ ಮೂಲಕ ಇತಿಹಾಸ ರಚಿಸಲಿದ್ದೇವೆ ಎಂದು ಹೇಳಿದೆ.

ಇದೇ ಮೊದಲ ಬಾರಿ ಸಕಲ ವೈಭವಗಳೊಂದಿಗೆ ತ್ರಿವರ್ಣ ಧ್ವಜಾರೋಹಣ ನಡೆಯಲಿದೆ ಎಂದು ಸಂಘಟನೆ ಹೇಳಿದೆ. ಈ ಕಾರ್ಯಕ್ರಮದಲ್ಲಿ  ನ್ಯೂಯಾರ್ಕ್‌ನಲ್ಲಿ ಕನ್ಸುಲ್ ಜನರಲ್ ಆಫ್ ಇಂಡಿಯಾ ಆಗಿರುವ ರಣಧೀರ್ ಜೈಸ್ವಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಟೈಮ್ಸ್ ಸ್ಕ್ವೇರ್‌ನಲ್ಲಿ ಧ್ವಜಾರೋಹಣ ಮತ್ತು ಎಂಪೈರ್ ಸ್ಟೇಟ್ ಕಟ್ಟಡದಲ್ಲಿ ಆಗಸ್ಟ್ 14ರಂದು ತ್ರಿವರ್ಣಧ್ವಜದ ಮೂರು ಬಣ್ಣಗಳನ್ನು ಮಿನುಗಿಸಲಾಗುವುದು ಎಂದು ಸಂಘಟನೆ ಹೇಳಿದೆ.  
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು