ಶನಿವಾರ, ನವೆಂಬರ್ 28, 2020
25 °C

ಸುರಕ್ಷಿತ ಚುನಾವಣೆ ಹೇಳಿಕೆ: ಅಧಿಕಾರಿ ಅಮಾನತುಗೊಳಿಸಿದ ಟ್ರಂಪ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಸುರಕ್ಷಿತವಾದ ಚುನಾವಣೆ ಎಂದು ಹೇಳಿದ್ದ ಹೋಮ್‌ ಲ್ಯಾಂಡ್‌ ಸೆಕ್ಯುರಿಟಿ ವಿಭಾಗದ ಅಧಿಕಾರಿಯನ್ನು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮಾನತುಗೊಳಿಸಿದ್ದಾರೆ.

ಈ ಬಗ್ಗೆ ಮಂಗಳವಾರ ಟ್ವೀಟ್‌ ಮಾಡಿರುವ ಡೊನಾಲ್ಡ್‌ ಟ್ರಂಪ್‌,‘ಹೋಮ್‌ ಲ್ಯಾಂಡ್‌ ಭದ್ರತಾ ವಿಭಾಗದ ಸೈಬರ್‌ ಭದ್ರತೆ ಮತ್ತು ಮೂಲಸೌಲಭ್ಯ ಭದ್ರತಾ ಏಜೆನ್ಸಿ(ಸಿಐಎಸ್‌ಎ) ನಿರ್ದೇಶಕ ಕ್ರಿಸ್‌ ಕ್ರೆಬ್ಸ್ ಅವರನ್ನು ಅಧಿಕಾರದಿಂದ ಅಮಾನತು ಗೊಳಿಸಿದ್ದೇನೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: 

‘2020ನೇ ಅಧ್ಯಕ್ಷೀಯ ಚುನಾವಣೆ ಬಗ್ಗೆ ಕ್ರಿಸ್‌ ಕ್ರೆಬ್ಸ್ ನೀಡಿದ ಹೇಳಿಕೆ ನಿಖರವಾಗಿಲ್ಲ. ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಸತ್ತವರ ಹೆಸರಲ್ಲಿ ಮತದಾನ, ಮತಗಟ್ಟೆಗಳಿಗೆ ವೀಕ್ಷಕರ ನೇಮಕಕ್ಕೆ ನಿರ್ಬಂಧ, ಮತ ಯಂತ್ರಗಳಲ್ಲಿ ತನಗೆ ಬರಬೇಕಾದ ಮತಗಳನ್ನು ಜೋ ಬೈಡನ್‌ಗೆ ವರ್ಗಾವಣೆಯಾಗುವಂತಹ ತಂತ್ರಗಳು ಸೇರಿದಂತೆ ಹಲವು ಅಕ್ರಮಗಳು ನಡೆದಿವೆ. ಈ ಕಾರಣಕ್ಕಾಗಿ ಕ್ರಿಸ್‌ ಕ್ರೆಬ್ಸ್ ಅವರನ್ನು ತಕ್ಷಣವೇ ಸಿಐಎಸ್‌ಎ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಲಾಗಿದೆ‘ ’ ಎಂದು ಅವರು ಟ್ವಿಟರ್‌ನಲ್ಲಿ ದೂರಿದ್ದಾರೆ. 

ಟ್ರಂಪ್ ಅವರ ಈ ನಡೆಯನ್ನು ಸೈಬರ್ ಸುರಕ್ಷತೆ ಕಾಕಸ್‌ನ ಸಹ-ಅಧ್ಯಕ್ಷ ಮಾರ್ಕ್ ವಾರ್ನರ್  ಅವರು ಖಂಡಿಸಿದ್ದಾರೆ. ‘ಕ್ರಿಸ್‌ ಕ್ರೆಬ್ಸ್ ಅವರು ಉತ್ತಮ ಸರ್ಕಾರಿ ಸೇವಕ. ಈ ಸ್ಥಾನಕ್ಕೆ ಸೂಕ್ತವಾದ ವ್ಯಕ್ತಿ. ಕ್ರಿಸ್‌ ಕ್ರೆಬ್ಸ್ ಸತ್ಯವನ್ನು ಹೇಳಿದ್ದಕ್ಕೆ ಅವರನ್ನು ಅಧಿಕಾರದಿಂದ ವಜಾಗೊಳಿಸಲಾಗಿದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು