ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲಿಬಾನ್‌ ಮಹಿಳೆಯರಿಗೆ ಉನ್ನತ ಶಿಕ್ಷಣ ನಿಷೇಧ: ಟರ್ಕಿಯೆ, ಸೌದಿ ಅರೇಬಿಯಾ ಖಂಡನೆ

Last Updated 22 ಡಿಸೆಂಬರ್ 2022, 14:00 IST
ಅಕ್ಷರ ಗಾತ್ರ

ಕಾಬೂಲ್‌ (ಎಪಿ): ವಿಶ್ವವಿದ್ಯಾಲಯಗಳಲ್ಲಿ ಮಹಿಳೆಯರಿಗೆ ಉನ್ನತ ಶಿಕ್ಷಣಕ್ಕೆ ಪ್ರವೇಶ ನಿಷೇಧಿಸಿರುವ ತಾಲಿಬಾನ್‌ ಆಡಳಿತ ನಿರ್ಧಾರವನ್ನು ಟರ್ಕಿಯೆ ಮತ್ತು ಸೌದಿ ಅರೇಬಿಯಾ ತೀವ್ರವಾಗಿ ಖಂಡಿಸಿವೆ.

ತಾಲಿಬಾನ್‌ ಸರ್ಕಾರದ ಈ ನಿರ್ಧಾರ ವಿರೋಧಿಸಿ24ಕ್ಕೂ ಹೆಚ್ಚು ಮಹಿಳೆಯರಿದ್ದ ಗುಂಪೊಂದು ಗುರುವಾರ ಕಾಬೂಲ್‌ ನಗರದ ಬೀದಿಗಳಲ್ಲಿ ಪ್ರತಿಭಟನೆ ನಡೆಸಿತು. ತಾಲಿಬಾನ್‌ ಆಡಳಿತದ ಈ ಧೋರಣೆಯನ್ನು ಅಫ್ಗಾನಿಸ್ತಾನದ ಹಲವು ಕ್ರಿಕೆಟಿಗರೂ ಖಂಡಿಸಿದ್ದಾರೆ.

ವಾರದ ಆರಂಭದಲ್ಲಿ ‘ಈ ಕ್ಷಣದಿಂದ ಮುಂದಿನ ಆದೇಶದವರೆಗೆ ಖಾಸಗಿ ಮತ್ತು ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಮಹಿಳೆಯರು ಪ್ರವೇಶಿಸುವಂತಿಲ್ಲ’ ಎಂದು ತಾಲಿಬಾನ್‌ ಸರ್ಕಾರ ಆದೇಶ ಹೊರಡಿಸಿತ್ತು. ಕೆಲವು ದಿನಗಳ ಹಿಂದೆ ಶಾಲೆಗೆ ಹೋಗದಂತೆ ಬಾಲಕಿಯರಿಗೆ ನಿಷೇಧ, ಉದ್ಯಾನ ಮತ್ತು ಜಿಮ್‌ಗಳಿಗೆ ಹೋಗದಂತೆ ಮತ್ತು ಉದ್ಯೋಗ ಮಾಡದಂತೆ ಮಹಿಳೆಯರಿಗೆ ನಿಷೇಧ ಹೇರಿತ್ತು. ಅಲ್ಲದೇ ಮಹಿಳೆಯರಿಗೆ ವಸ್ತ್ರಸಂಹಿತೆ ಜಾರಿಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT