ಮಂಗಳವಾರ, ನವೆಂಬರ್ 24, 2020
22 °C

ಟರ್ಕಿ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಎರ್ಡೊಗನ್‌ ಅಳಿಯ

ಎಪಿ Updated:

ಅಕ್ಷರ ಗಾತ್ರ : | |

Prajavani

ಅಂಕಾರ: ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರ ಅಳಿಯ, ಹಣಕಾಸು ಸಚಿವ ಬೆರಟ್‌ ಅಲ್ಬೈರಾಕ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಈ ವಿಷಯ ಹಂಚಿಕೊಂಡಿರುವ  ಅವರು, ‘ಆರೋಗ್ಯ ಸಂಬಂಧಿತ ಕಾರಣದಿಂದಾಗಿ ಸಚಿವ ಸ್ಥಾನದಿಂದ ಕೆಳಗಿಳಿಯುತ್ತಿದ್ದೇನೆ. ಹೆಚ್ಚಿನ ಸಮಯವನ್ನು ಕುಟುಂಬದವರೊಂದಿಗೆ ಕಳೆಯಲು ಬಯಸುತ್ತೇನೆ’ ಎಂದು ತಿಳಿಸಿದ್ದಾರೆ. 

ಬೆರಟ್‌ ಅಲ್ಬೈರಾಕ್ ಅವರು ಮೂರು ವರ್ಷಗಳ ಹಿಂದೆ ಇಂಧನ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಜುಲೈ 2018ರಲ್ಲಿ ಅವರನ್ನು ಹಣಕಾಸು ಮತ್ತು ಖಜಾನೆ ಸಚಿವರನ್ನಾಗಿ ನೇಮಿಸಲಾಯಿತು.

‘ಐದು ವರ್ಷಗಳ ಕಾಲ ಸಚಿವನಾಗಿ ಕರ್ತವ್ಯ ನಿರ್ವಹಿಸಿದ ಬಳಿಕ ಆರೋಗ್ಯ ಸಂಬಂಧಿತ ಕಾರಣದಿಂದ ಸಚಿವ ಸ್ಥಾನದಿಂದ ಕೆಳಗೆ ಇಳಿಯಲು ನಿರ್ಧರಿಸಿದ್ದೇನೆ. ನನ್ನ ತಾಯಿ, ತಂದೆ, ಪತ್ನಿ ಮತ್ತು ಮಕ್ಕಳೊಂದಿಗೆ ಸಮಯ ಕಳೆಯುತ್ತೇನೆ. ಹಲವು ವರ್ಷಗಳ ಕಾಲ ಕೆಲಸದಿಂದಾಗಿ ನಾನು ಪರಿವಾರವನ್ನು ನಿರ್ಲಕ್ಷ್ಯಿಸಿದ್ದೆ. ಆದರೂ ಅವರು ಸದಾ ನನ್ನ ಜೊತೆಗೆ ನಿಂತಿದ್ದರು’ ಎಂದು ಅಲ್ಬೈರಾಕ್ ಹೇಳಿದರು. 

ಬೆರಟ್‌ ಅಲ್ಬೈರಾಕ್ ಅವರು ತಮ್ಮ ರಾಜೀನಾಮೆಗೂ ಮುನ್ನ ಟರ್ಕಿಯ ಕೇಂದ್ರ ಬ್ಯಾಂಕಿನ ಮುಖ್ಯಸ್ಥ ಮೂರತ್‌ ಉಯಿಸಲ್‌ ಅವರನ್ನು ಅಧಿಕಾರದಿಂದ ವಜಾಗೊಳಿಸಿದ್ದರು. ಅವರ ಸ್ಥಾನಕ್ಕೆ ಮಾಜಿ ಹಣಕಾಸು ಸಚಿವ ನಾಸಿ ಅಗ್ಬಲ್‌ ಅವರನ್ನು ನೇಮಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು