ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆರು: ಕಂದಕಕ್ಕೆ ಉರುಳಿದ ಪ್ರಯಾಣಿಕರ ಬಸ್– 20 ಸಾವು, 33 ಜನರಿಗೆ ಗಾಯ

Last Updated 11 ಫೆಬ್ರುವರಿ 2022, 3:09 IST
ಅಕ್ಷರ ಗಾತ್ರ

ಲಿಮಾ: ಉತ್ತರ ಪೆರುವಿನ ಪಟಾಜ್‌ನಲ್ಲಿ ಪ್ರಯಾಣಿಕರ ಬಸ್ ಸುಮಾರು 100 ಮೀಟರ್ ಆಳದ ಕಂದಕಕ್ಕೆ ಉರುಳಿದ ಪರಿಣಾಮ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಮತ್ತು 33 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಗುರುವಾರ ದೃಢಪಡಿಸಿದ್ದಾರೆ.

ತಯಾಬಾಂಬಾ ಮತ್ತು ಹುವಾನ್‌ಕಾಸ್‌ಪಾಟಾ ನಡುವಿನ ಗ್ರಾಮೀಣ ವಲಯದಲ್ಲಿ ಬುಧವಾರ ಸ್ಥಳೀಯ ಕಾಲಮಾನ ಸುಮಾರು 14:40 ಕ್ಕೆ ಅಪಘಾತ ಸಂಭವಿಸಿದೆ ಎಂದು ಪ್ರಾದೇಶಿಕ ಆರೋಗ್ಯ ಇಲಾಖೆ ತಿಳಿಸಿದೆ ಎಂದು ಕ್ಸಿನ್‌ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವರದಿಯ ಪ್ರಕಾರ, ಪಿಕಾಫ್ಲೋರ್ ಕಂಪನಿಗೆ ಸೇರಿದ ಅಂತರ್‌ ಪ್ರಾಂತೀಯ ಬಸ್, ತಯಾಬಾಂಬಾದಿಂದ ಲಾ ಲಿಬರ್ಟಾಡ್‌ನ ರಾಜಧಾನಿ ಟ್ರುಜಿಲ್ಲೊಗೆ ಹೋಗುತ್ತಿದ್ದಾಗ ಅದು ರಸ್ತೆಯಿಂದ ಜಾರಿ ಕಂದಕಕ್ಕೆ ಬಿದ್ದಿದೆ.

ಹತ್ತಿರದ ಪಟ್ಟಣಗಳಲ್ಲಿ ವಾಸಿಸುವ ಜನರು ಗಾಯಗೊಂಡ ಪ್ರಯಾಣಿಕರ ಸಹಾಯಕ್ಕೆ ಬಂದಿದ್ದರು. ಅವರನ್ನು ತಯಾಬಾಂಬಾ, ಹುವಾನ್‌ಕಾಸ್‌ಪಾಟಾ ಮತ್ತು ಟ್ರುಜಿಲ್ಲೊದಲ್ಲಿನ ಆರೋಗ್ಯ ಕೇಂದ್ರಗಳಿಗೆ ದಾಖಲಿಸಿದ್ದರು.

ರಾಷ್ಟ್ರೀಯ ಪೊಲೀಸ್ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿಯ ಸಿಬ್ಬಂದಿ ಶವಗಳನ್ನು ಹೊರತೆಗೆಯುವ ಮತ್ತು ತನಿಖೆಯನ್ನು ಪ್ರಾರಂಭಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT