ಭಾನುವಾರ, ಜುಲೈ 3, 2022
24 °C

ಡೊನಾಲ್ಡ್‌ ಟ್ರಂಪ್‌ ಖಾತೆ ನಿಷೇಧದ ಬಗ್ಗೆ ಮೌನ ಮುರಿದ ಟ್ವಿಟರ್‌ ಸಿಇಒ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಿರುವ ವಿಚಾರವಾಗಿ ಟ್ವಿಟರ್‌ ಸಿಇಒ ಜಾಕ್‌ ಡಾರ್ಸಿ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ಟ್ವಿಟರ್‌ನ ಈ ಕ್ರಮವು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗೆಗಿನ ಚರ್ಚೆಯನ್ನು ಹುಟ್ಟುಹಾಕಿದೆ. ಆ ಹಿನ್ನೆಲೆಯಲ್ಲಿ ಮಾತನಾಡಿರುವ ಡಾರ್ಸೆ, 'ಆರೋಗ್ಯಕರ ಸಂವಾದ ನಡೆಸಲು ಟ್ವಿಟರ್‌ ವೇದಿಕೆ ವಿಫಲವಾಗಿತು' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ಟ್ರಂಪ್‌ ಖಾತೆ ಮೇಲೆ ನಿಷೇಧ ಹೇರಿದ ನಿರ್ಧಾರವನ್ನು ಡಾರ್ಸೆ ಸಮರ್ಥಿಸಿಕೊಂಡಿದ್ದಾರೆ.

'ಟ್ರಂಪ್‌ ಅವರ ಟ್ವಿಟರ್‌ ಖಾತೆಯನ್ನು ನಿಷೇಧಿಸಿದ ಬಗ್ಗೆ ನಾನು ಹೆಮ್ಮೆಪಡುತ್ತಿಲ್ಲ. ಸ್ಪಷ್ಟ ಎಚ್ಚರಿಕೆಗಳನ್ನು ನೀಡಿದ ನಂತರವೇ ಟ್ರಂಪ್‌ ಖಾತೆ ಮೇಲೆ ನಿಷೇಧ ಹೇರಲಾಯಿತು. ಟ್ವಿಟರ್‌ನ ಒಳಗೆ ಮತ್ತು ಹೊರಗೆ ಹಿಂಸೆಯನ್ನು ಪ್ರಚೋದಿಸುವಂತಹ ಬೆದರಿಕೆಗಳು ಹರಿದಾಡತೊಡಗಿದವು. ಈ ಬಗ್ಗೆ ನಿಖರ ಮಾಹಿತಿಗಳನ್ನು ಕಲೆಹಾಕಿದ ನಂತರವೇ ನಿರ್ಧಾರ ಕೈಗೊಳ್ಳಲಾಯಿತು' ಎಂದು ಜಾಕ್‌ ಡಾರ್ಸಿ ತಿಳಿಸಿದ್ದಾರೆ.

'ನಾವು ತೆಗೆದುಕೊಂಡಿರುವುದು ಸರಿಯಾದ ನಿರ್ಧಾರವೆಂದು ನಾನು ನಂಬಿದ್ದೇನೆ. ನಾವು ಅಪಾಯಕರ ಮತ್ತು ಒಪ್ಪಿಕೊಳ್ಳಲು ಯೋಗ್ಯವಲ್ಲದ ಸನ್ನಿವೇಶವನ್ನು ಎದುರಿಸಿದೆವು. ನಮ್ಮ ಎಲ್ಲಾ ಕೆಲಸಗಳು ಸಾರ್ವಜನಿಕರ ಸುರಕ್ಷತೆಗೆ ಪೂರಕವಾಗಿರಬೇಕೆಂಬುದು ನಮ್ಮ ಅಭಿಲಾಷೆಯಾಗಿದೆ' ಎಂದು ಡಾರ್ಸೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

‘ಮತ್ತಷ್ಟು ಹಿಂಸಾಚಾರವನ್ನು ಪ್ರಚೋದಿಸುವಂತಹ ಅಪಾಯವಿರುವ ಕಾರಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿದೆ' ಎಂದು ಸಾಮಾಜಿಕ ಮಾಧ್ಯಮ ಸಂಸ್ಥೆ ಟ್ವಿಟರ್ ತಿಳಿಸಿತ್ತು. ಟ್ರಂಪ್ ಅವರು ಟ್ವಿಟರ್‌ನಲ್ಲಿ 8.87 ಕೋಟಿ ಹಿಂಬಾಲಕರನ್ನು ಹೊಂದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು