ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ: ಸಿಂಗಪುರದಲ್ಲಿ ಇಬ್ಬರು ಭಾರತೀಯರಿಗೆ ದಂಡ

Last Updated 27 ಜನವರಿ 2023, 14:09 IST
ಅಕ್ಷರ ಗಾತ್ರ

ಸಿಂಗಪುರ: ಆಹಾರ ವಿತರಣಾ ಘಟಕವೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರು ಭಾರತೀಯರು 2020ರಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ. ಇದಕ್ಕಾಗಿ ಪ್ರತಿಯೊಬ್ಬರಿಗೂ 24 ಸಾವಿರ ಸಿಂಗಪುರ ಡಾಲರ್‌ (ಸುಮಾರು ₹ 14.90 ಲಕ್ಷ) ದಂಡ ವಿಧಿಸಲಾಗಿದೆ.

‘ಮಾಹೇಶ್ವರನ್‌ ಎಂ. ರತಿನಸವಪತಿ (27) ಹಾಗೂ ರೆನಿತಾ ಮುರಳೀಧರನ್‌ (31) ಅವರ ವಿರುದ್ಧ ಮೂರು ಭ್ರಷ್ಟಾಚಾರ ಪ್ರಕರಣಗಳಿದ್ದವು’ ಎಂದು ದಿ ಸ್ಟ್ರೈಯ್ಸ್‌ ಟೈಮ್ಸ್‌ ಪತ್ರಿಕೆ ಗುರುವಾರ ವರದಿ ಮಾಡಿದೆ.

‘ರತಿನಸವಪತಿ ಅವರು ‘ಸೊನ್ನಾಮೆರಾ’ ಆಹಾರ ವಿತರಣಾ ಘಟಕದ, ಉಗ್ರಾಣ ಮೇಲ್ವಿಚಾರಕರಾಗಿದ್ದರು. ಈ ವೇಳೆ, ಮಾನವ ಸಂಪನ್ಮೂಲ ಗುತ್ತಿಗೆ ಸೇವಾ ಕಂಪನಿ ‘ಇನ್‌ಸ್ಪ್ರೋ’ದ ನಿರ್ದೇಶಕಿ ಹೇಮಾ ಸುತಾನ್‌ ಅಚ್ಚುತಾನಾಯರ್‌ ಅವರಿಂದ 6,800 ಸಿಂಗಪುರ ಡಾಲರ್‌ (ಸುಮಾರು ₹ 4.14 ಲಕ್ಷ) ಲಂಚ ಪಡೆದಿದ್ದರು. ಸೊನ್ನಾಮೆರಾ ಕಂಪನಿಗೆ ಇನ್‌ಸ್ಪ್ರೋ ಕುರಿತು ಶಿಫಾರಸು ಮಾಡಲು ಹಣ ಪಡೆದುಕೊಳ್ಳಲಾಗಿತ್ತು’ ಎಂದಿದೆ.

‘ತಮ್ಮ ಯೋಜನೆಯನ್ನು ಜಾರಿಗೊಳಿಸಲು ಆಡಳಿತಾತ್ಮಕ ಕಾರ್ಯನಿರ್ವಾಹಕ/ಲೆಕ್ಕಾಧಿಕಾರಿ ಮುರಳೀಧರನ್‌ ಅವರಿಗೆ ರತಿನಸವಪತಿ ಅವರು ₹ 2.07 ಲಕ್ಷ ನೀಡಿದ್ದರು’ ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT