ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಸಾದ ಹ್ಯೂಮನ್ ಎಕ್ಸ್‌ಪ್ಲೊರೇಶನ್ ರೋವರ್ ಚಾಲೆಂಜ್ ಗೆದ್ದ ಭಾರತೀಯ ವಿದ್ಯಾರ್ಥಿಗಳು

Last Updated 4 ಮೇ 2022, 2:31 IST
ಅಕ್ಷರ ಗಾತ್ರ

ವಾಷಿಂಗ್ಟನ್: ಪಂಜಾಬ್ ಮತ್ತು ತಮಿಳುನಾಡಿನ ಎರಡು ವಿದ್ಯಾರ್ಥಿಗಳ ತಂಡ ನಾಸಾ–2022 ಹ್ಯೂಮನ್ ಎಕ್ಸ್‌ಪ್ಲೊರೇಶನ್ ರೋವರ್ ಚಾಲೆಂಜ್ ಅನ್ನು ಗೆದ್ದಿವೆ ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ.

ಏಪ್ರಿಲ್ 29ರಂದು ವರ್ಚುವಲ್ ಪ್ರಶಸ್ತಿ ಸಮಾರಂಭದ ಸಂದರ್ಭದಲ್ಲಿ ಅಮೆರಿಕದ ರಾಷ್ಟ್ರೀಯ ವೈಮಾನಿಕ ಮತ್ತು ಬಾಹ್ಯಾಕಾಶ ಆಡಳಿತವು ಈ ಘೋಷಣೆ ಮಾಡಿದೆ. ಈ ಸ್ಪರ್ಧೆಯಲ್ಲಿ 58 ಕಾಲೇಜುಗಳು ಮತ್ತು 33 ಪ್ರೌಢಶಾಲೆಗಳಿಂದ 91 ತಂಡಗಳು ಭಾಗವಹಿಸಿದ್ದವು.

ಸೌರವ್ಯೂಹದಲ್ಲಿನ ಗ್ರಹಗಳ ಕಠಿಣ ಮೇಲ್ಮೈ ಮೇಲೆ ಚಲಿಸುವ ಮಾನವ-ಚಾಲಿತ ರೋವರ್ ಅನ್ನು ವಿನ್ಯಾಸಗೊಳಿಸುವುದು, ಅವುಗಳ ನಿರ್ವಹಣೆ ಮಾಡುವುದು ಅಂತರರಾಷ್ಟ್ರೀಯ ವಿದ್ಯಾರ್ಥಿ ತಂಡಗಳಿಗೆ ಒಡ್ಡಲಾಗಿದ್ದ ಸ್ಪರ್ಧೆಯಾಗಿತ್ತು.

ಪಂಜಾಬ್‌ನ ಡೀಸೆಂಟ್ ಚಿಲ್ಡ್ರನ್ ಮಾಡೆಲ್ ಪ್ರೆಸಿಡೆನ್ಸಿ ಸ್ಕೂಲ್ ಹೈಸ್ಕೂಲ್ ವಿಭಾಗದಲ್ಲಿ ಸ್ಟೆಮ್ ಎಂಗೇಜ್‌ಮೆಂಟ್ ಪ್ರಶಸ್ತಿಯನ್ನು ಗೆದ್ದರೆ,. ತಮಿಳುನಾಡಿನ ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತಂಡವು ಕಾಲೇಜು/ವಿಶ್ವವಿದ್ಯಾಲಯ ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT