ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಚೀನಾದ ಇನ್ನಷ್ಟು ಪ್ರದೇಶಗಳು ಲಾಕ್

Last Updated 16 ಏಪ್ರಿಲ್ 2022, 15:21 IST
ಅಕ್ಷರ ಗಾತ್ರ

ಶಾಂಘೈ: ಚೀನಾದ ವಾಣಿಜ್ಯ ನಗರಿ ಶಾಂಘೈನಲ್ಲಿ ಶನಿವಾರವೂ ಅತಿಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿವೆ. ‌ಓಮೈಕ್ರಾನ್ ನಿಯಂತ್ರಣಕ್ಕಾಗಿ ಚೀನಾದ ಹಲವು ಕಡೆಗಳಲ್ಲಿ ಕೋವಿಡ್ ನಿರ್ಬಂಧ ಕ್ರಮಗಳನ್ನು ಜಾರಿ ಮಾಡಲಾಗಿದೆ.

ಶಾಂಘೈನಲ್ಲಿ ಶುಕ್ರವಾರ ಒಂದೇ ದಿನ3,590 ಕೊರೊನಾ ಲಕ್ಷಣಗಳಿರುವ ಪ್ರಕರಣಗಳು ಪತ್ತೆಯಾದರೆ, 19,923 ಮಂದಿ ಕೋವಿಡ್ ಲಕ್ಷಣ ರಹಿತ ಸೋಂಕಿತರಾಗಿದ್ದಾರೆ.

ಜುಝುವಾ ನಗರದಲ್ಲಿ ನಾಗರಿಕರು ತಮ್ಮ ಮನೆಗಳಿಂದ ಹೊರಗೆ ಬರದಂತೆ ಸೂಚಿಸಲಾಗಿದ್ದು, ಮನೆಯಿಂದ ಕೆಲಸ ಮಾಡಲು ಸಾಧ್ಯವಿರುವವರು ಮನೆಯಿಂದಲೇ ಕೆಲಸ ಮಾಡಬೇಕು. ಅನಗತ್ಯವಾಗಿ ಜನ ಮತ್ತು ವಾಹನಗಳು ಓಡಾಡಬಾರದು ಎಂದು ಸೂಚಿಸಲಾಗಿದೆ.

ಝೆಂಗ್‌ಝುವಾ ವಿಮಾನ ನಿಲ್ದಾಣ, ಆರ್ಥಿಕ ವಲಯ ಪ್ರದೇಶಗಳಲ್ಲಿ 14 ದಿನಗಳ ಲಾಕ್‌ಡೌನ್ ಹೇರಲಾಗಿದೆ.ಕ್ಸಿಯಾನ್ ನಗರದಲ್ಲೂ ನಿರ್ಬಂಧ ಹೇರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT