ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಎಇ: ಜನವರಿ 1ರಿಂದ ವಾರಕ್ಕೆ ನಾಲ್ಕೂವರೆ ದಿನ ಕೆಲಸ!

Last Updated 7 ಡಿಸೆಂಬರ್ 2021, 13:11 IST
ಅಕ್ಷರ ಗಾತ್ರ

ದುಬೈ: ಕೆಲಸ ಮತ್ತು ಜೀವನದ ನಡುವೆ ಸಮತೋಲನ ಕಾಪಾಡುವ ಪ್ರಯತ್ನವಾಗಿ ವಾರಕ್ಕೆ ನಾಲ್ಕೂವರೆ ದಿನವಷ್ಟೇ ಕೆಲಸ ಮಾಡುವ ಹೊಸ ಪದ್ಧತಿಯನ್ನು ಸಂಯುಕ್ತ ಅರಬ್‌ ಒಕ್ಕೂಟ (ಯುಎಇ) ಮಂಗಳವಾರ ಪ್ರಕಟಿಸಿದ್ದು, ಜನವರಿ 1ರಿಂದ ಇದು ಜಾರಿಗೆ ಬರಲಿದೆ ಎಂದು ತಿಳಿಸಿದೆ.

‘ಉತ್ಪಾದಕತೆ ಹೆಚ್ಚಿಸುವ ಮತ್ತು ಕೆಲಸದೊಂದಿಗೆ ಜೀವನವನ್ನು ಸಮತೋಲನಗೊಳಿಸುವ ನಿಟ್ಟಿನಲ್ಲಿ ನೌಕರ ಸ್ನೇಹಿ ಕ್ರಮ ಇದಾಗಿದ್ದು, ವಾರಕ್ಕೆ ನಾಲ್ಕೂವರೆ ದಿನ ಕೆಲಸದ ಅವಧಿಯನ್ನು ಜಾರಿಗೆ ತರುತ್ತಿರುವ ಜಗತ್ತಿನ ಮೊದಲ ದೇಶ ನಮ್ಮದು’ ಎಂದು ಯುಎಇ ಸರ್ಕಾರಿ ಮಾಧ್ಯಮ ಕಚೇರಿಯ ಪ್ರಕಟಣೆ ತಿಳಿಸಿದೆ.

ಸೋಮವಾರದಿಂದ ಗುರುವಾರದವರೆಗೆ ಬೆಳಿಗ್ಗೆ 7.30ರಿಂದ ಸಂಜೆ 3.30ರವರೆಗೆ ಕೆಲಸದ ಅವಧಿ ನಿಗದಿಪಡಿಸಲಾಗಿದ್ದು, ಶುಕ್ರವಾರ ಅರ್ಧ ದಿನ ಅಂದರೆ ಬೆಳಿಗ್ಗೆ 7.30ರಿಂದ ಮಧ್ಯಾಹ್ನ 12ರವರೆಗೆ ಕೆಲಸದ ಅವಧಿ ಇರುತ್ತದೆ. ಶನಿವಾರ ಮತ್ತು ಭಾನುವಾರ ಪೂರ್ಣ ರಜಾ ದಿನಗಳಾಗಿರುತ್ತವೆ.

‘ಸುದೀರ್ಘ ವಾರಾಂತ್ಯದಿಂದಾಗಿ ಉತ್ಪಾದಕತೆಗೆ ಉತ್ತೇಜನ ಸಿಗಲಿದೆ ಮತ್ತು ಕೆಲಸ–ಜೀವನ ನಡುವೆ ಸಮತೋಲನ ಸಾಧಿಸಿ ಜೀವನ ಸುಧಾರಣೆ ಸಾಧ್ಯವಾಗಲಿದೆ’ ಎಂದು ಸರ್ಕಾರ ಹೇಳಿದೆ.

ಶುಕ್ರವಾರಗಳಂದು ಉದ್ಯೋಗಿಗಳು ಮಧ್ಯಾಹ್ನ 1.15ರ ಬಳಿಕ ಪ್ರಾರ್ಥನೆ ನಡೆಸಬಹುದು. ಶುಕ್ರವಾರಗಳಂದು ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ ಮಾಡಿಕೊಳ್ಳುವುದಕ್ಕೂ ಅವಕಾಶ ಕಲ್ಪಿಸಲಾಗಿದೆ.

ಮೊದಲಿಗೆ ಸರ್ಕಾರಿ ಕಚೇರಿಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದ್ದು, ಬಳಿಕ ಶಾಲೆಗಳು, ಕಾಲೇಜುಗಳು ಮತ್ತು ಖಾಸಗಿ ಸಂಸ್ಥೆಗಳಲ್ಲಿ ಜಾರಿಗೆ ಬರುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT