ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬುಧಾಬಿ ರಾಜಕುಮಾರನಾಗಿ ಶೇಖ್‌ ಖಾಲಿದ್‌ ನೇಮಕ

Last Updated 30 ಮಾರ್ಚ್ 2023, 14:35 IST
ಅಕ್ಷರ ಗಾತ್ರ

ದುಬೈ: ಸಂಯುಕ್ತ ಅರಬ್‌ ಸಂಸ್ಥಾನದ (ಯುಎಇಎ) ಅಧ್ಯಕ್ಷ ಶೇಖ್‌ ಮೊಹಮ್ಮದ್‌ ಬಿನ್‌ ಝಾಯೆದ್‌ ಅಲ್‌ ನಯ್ಯನ್‌ ಅವರು ತಮ್ಮ ಹಿರಿಯ ಪುತ್ರ, 41ರ ಹರೆಯದ ಶೇಖ್‌ ಖಾಲಿದ್‌ ಅವರನ್ನು ಅಬುಧಾಬಿಯ ರಾಜಕುಮಾರನಾಗಿ ನೇಮಿಸಿದ್ದಾರೆ.

ಬುಧವಾರ ತಡವಾಗಿ ಮಹತ್ವದ ಈ ಬೆಳವಣಿಗೆ ನಡೆದಿದೆ. ಸಮೃದ್ಧ ತೈಲದ ಕೊಲ್ಲಿ ಸಾಮ್ರಾಜ್ಯದ ರಾಜಪ್ರಭುತ್ವಕ್ಕೆ ತಮ್ಮ ಪ್ರೀತಿ ಪಾತ್ರ ಪುತ್ರನನ್ನು ಮುಂದಿನ ಉತ್ತರಾಧಿಕಾರಿಯನ್ನಾಗಿಸಿ ಕುಟುಂಬದಲ್ಲೇ ಅಧಿಕಾರ ಹಿಡಿದಿಟ್ಟುಕೊಳ್ಳಲು ಅಧ್ಯಕ್ಷರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಶೇಖ್‌ ಮೊಹಮ್ಮದ್‌ ಬಿನ್‌ ಝಾಯೆದ್‌ ಅಲ್‌ ನಯ್ಯನ್‌ ಅವರ ಸಹೋದರ ಶೇಖ್ ಮನ್ಸೂರ್ ಬಿನ್ ಝಾಯೆದ್ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇವರು ಮ್ಯಾಂಚೆಸ್ಟರ್ ಸಿಟಿ ಫುಟ್‌ಬಾಲ್‌ ಕ್ಲಬ್ ಮಾಲೀಕರೂ ಹೌದು. ಯುಎಇ ಪ್ರಧಾನಿ ಮತ್ತು ದುಬೈನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರಿಗೆ ಆಡಳಿತದಲ್ಲಿ ಶೇಖ್‌ ಮನ್ಸೂರ್‌ ಬಿನ್‌ ಝಾಯೆದ್‌ ಕೈಜೋಡಿಸಿದ್ದಾರೆ.

ಅಧ್ಯಕ್ಷರ ಮತ್ತಿಬ್ಬರು ಸಹೋದರರಲ್ಲಿ ಒಬ್ಬರಾದ ತಹ್ನೌನ್ ಬಿನ್ ಝಾಯೆದ್ ಮತ್ತು ಹಝ್ಝಾ ಬಿನ್‌ ಝಾಯೆದ್‌ ಅವರು ಅಬುಧಾಬಿಯ ಉಪ ಆಡಳಿತಗಾರರಾಗಿದ್ದಾರೆ. ತಹ್ನೌನ್‌ ಬಿನ್‌ ಝಾಯೆದ್ ಅವರು ಯುಎಇಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಅಬುಧಾಬಿಯ ಸಾರ್ವಭೌಮ ಸಂಪತ್ತು ನಿಧಿಯಲ್ಲಿ ಒಂದೆನಿಸಿದ ಎಡಿಕ್ಯೂ ಕಂಪನಿ ಅಧ್ಯಕ್ಷ ಕೂಡ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT