ಶನಿವಾರ, ಮೇ 28, 2022
21 °C
40 ದಿನಗಳ ಶೋಕಾಚರಣೆ

ಯುಎಇ ಅಧ್ಯಕ್ಷ, ಅಬು ದಾಬಿ ದೊರೆ ಶೇಕ್ ಖಲೀಫಾ ಬಿನ್ ಜಾಯೆದ್ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

ದುಬೈ: ಯುಎಇ ಅಧ್ಯಕ್ಷ ಮತ್ತು ಅಬು ದಾಬಿ ದೊರೆ ಶೇಕ್ ಖಲೀಫಾ ಬಿನ್ ಜಾಯೆದ್‌ ಅಲ್ ನಹ್ಯಾನ್ ಅವರು ಶುಕ್ರವಾರ ನಿಧರಾಗಿದ್ದಾರೆ ಎಂದು ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಶೇಕ್ ಖಲೀಫಾ ಅವರು ಯುಎಇ ಅಧ್ಯಕ್ಷರಾಗಿ ಹಾಗೂ ಅಬು ದಾಬಿಯ ದೊರೆಯಾಗಿ 2004, ನವೆಂಬರ್‌ 3ರಿಂದ ಸೇವೆ ಸಲ್ಲಿಸಿದ್ದಾರೆ.

ಯುಎಇ ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯವು ಶೇಕ್‌ ಖಲೀಫಾ ಅವರ ನಿಧನಕ್ಕೆ ಸಂತಾಪ ಸೂಚಿಸಿ 40 ದಿನಗಳ ಶೋಕಾಚರಣೆಯನ್ನು ಘೋಷಿಸಿದೆ ಎಂದು 'ಖಲೀಜಾ ಟೈಮ್ಸ್‌' ವರದಿ ಮಾಡಿದೆ.

ಸಂತಾಪ ಸೂಚಕವಾಗಿ ಬಾವುಟಗಳನ್ನು ಅರ್ಧಕ್ಕೆ ಇಳಿಸಲಾಗುತ್ತದೆ. ಸಚಿವಾಲಯದ ಕಚೇರಿಗಳು, ಸರ್ಕಾರಿ ಇಲಾಖೆಗಳು, ಬ್ಯಾಂಕ್‌ಗಳು ಮತ್ತು ಸ್ಥಳೀಯ ಸಂಸ್ಥೆಗಳು ಶುಕ್ರವಾರದಿಂದ 40 ದಿನಗಳ ಕಾಲ ಸೇವೆ ಸ್ಥಗಿತ ಮಾಡಲಿವೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಸಂತಾಪ ಸೂಚಿಸಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು