ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಎಇ: ಭಾರತದಿಂದ ಬರುವವರಿಗೆ ‘ಸ್ಥಳದಲ್ಲೇ ವೀಸಾ’ ಸೌಲಭ್ಯ ತಾತ್ಕಾಲಿಕ ರದ್ದು

Last Updated 24 ಆಗಸ್ಟ್ 2021, 12:16 IST
ಅಕ್ಷರ ಗಾತ್ರ

ದುಬೈ: ಭಾರತದಿಂದ ಬರುವ ಪ್ರಯಾಣಿಕರಿಗೆ ಅನ್ವಯಿಸುವಂತೆ ‘ಬಂದಿಳಿಯುತ್ತಿದ್ದಂತೆಯೇ ನೀಡುತ್ತಿದ್ದ ವೀಸಾ’ ಸೌಲಭ್ಯವನ್ನು (ವೀಸಾ ಆನ್‌ ಅರೈವಲ್‌) ಯುಎಇ ಸರ್ಕಾರ ತಾತ್ಕಾಲಿಕವಾಗಿ ರದ್ದುಗೊಳಿಸಿದೆ.

ಅಲ್ಲದೇ, ಕಳೆದ 14 ದಿನಗಳ ಅವಧಿಯಲ್ಲಿ ಭಾರತದಲ್ಲಿದ್ದ ಪ್ರಯಾಣಿಕರಿಗೂ ಈ ನಿಯಮ ಅನ್ವಯಿಸುತ್ತದೆ ಎಂದು ಎತಿಹಾದ್‌ ಏರ್‌ವೇಯ್ಸ್ ಟ್ವೀಟ್‌ ಮಾಡಿದೆ.

‘ವೀಸಾ ನಿಯಮಗಳಿಗೆ ಸಂಬಂಧಿಸಿದ ಇತ್ತೀಚಿನ ಮಾಹಿತಿಯೊಂದಿಗೆ ವೆಬ್‌ಸೈಟ್‌ ಅನ್ನು ಅಪ್‌ಡೇಟ್‌ ಮಾಡಲು ಶ್ರಮಿಸುತ್ತಿರುವುದಾಗಿ’ ಸಹ ಅಬುಧಾಬಿ ಮೂಲದ ಈ ವಿಮಾನಯಾನ ಸಂಸ್ಥೆ ತಿಳಿಸಿದೆ.

‘ಅಮೆರಿಕ ವೀಸಾ ಹೊಂದಿರುವ ಭಾರತೀಯ ಪ್ರಜೆ ಅಬುಧಾಬಿಗೆ ಬಂದು, ಬಂದಿಳಿಯುತ್ತಿದ್ದಂತೆಯೇ ನೀಡುವ ವೀಸಾ ಪಡೆದ ನಂತರ ಪ್ರತ್ಯೇಕ ವಾಸಕ್ಕೆ ಒಳಗಾಗದೇ ದುಬೈಗೆ ಪ್ರಯಾಣಿಸಬಹುದೇ’ ಎಂಬುದಾಗಿ ಪ್ರಯಾಣಿಕರೊಬ್ಬರು ಕೇಳಿದ್ದರು. ಈ ಪ್ರಶ್ನೆಗೆ ಟ್ವೀಟ್‌ ಮೂಲಕ ನೀಡಿರುವ ಉತ್ತರದಲ್ಲಿ ವಿಮಾನಯಾನ ಸಂಸ್ಥೆ ಈ ಮಾಹಿತಿ ನೀಡಿದೆ.

ವೀಸಾ ನಿಯಮಗಳಿಗೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಾಗಿ https: //bit.ly/TravelGuideEN ಪೋರ್ಟಲ್ ಗಮನಿಸುತ್ತಿರುವಂತೆ ಎತಿಹಾದ್‌ ಏರ್‌ವೇಯ್ಸ್‌ ಪ್ರಯಾಣಿಕರಿಗೆ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT