ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಎಇಯಿಂದ 4 ತಿಂಗಳು ಭಾರತದ ಗೋಧಿ ರಫ್ತು ಸ್ಥಗಿತ

Last Updated 15 ಜೂನ್ 2022, 17:20 IST
ಅಕ್ಷರ ಗಾತ್ರ

ದುಬೈ : ಭಾರತದಿಂದ ತರಿಸಿಕೊಂಡ ಗೋಧಿಯನ್ನು ಇತರ ದೇಶಗಳಿಗೆ ರಫ್ತು, ಪುನರ್‌ ರಫ್ತು ಮಾಡುವ ಪ್ರಕ್ರಿಯೆಯನ್ನು ನಾಲ್ಕು ತಿಂಗಳ ಮಟ್ಟಿಗೆ ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ) ಸ್ಥಗಿತಗೊಳಿಸಿದೆ.

ಜಾಗತಿಕ ವ್ಯಾಪಾರ ವಹಿವಾಟಿನಲ್ಲಿ ಎದುರಾಗಿರುವ ಅಡ್ಡಿಗಳಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಡಬ್ಲ್ಯುಎಎಂ ಸುದ್ದಿಸಂಸ್ಥೆ ತಿಳಿಸಿದೆ.

ಜಾಗತಿಕವಾಗಿ ಗೋಧಿಯನ್ನು ಬೆಳೆಯುವ ಎರಡನೇ ದೊಡ್ಡದೇಶವಾದ ಭಾರತದಿಂದ ಯುಎಇ ಗೋಧಿ ತರಿಸಿಕೊಳ್ಳುತ್ತದೆ.ಮೇ 14ರಂದು ಗೋಧಿ ರಫ್ತನ್ನು ನಿಷೇಧಿಸಿರುವ ಭಾರತವು, ಈ ದಿನಕ್ಕೂ ಮುನ್ನ ಗೋಧಿ ಖರೀದಿಗೆ ಸಂಬಂಧಿಸಿದಂತೆ‘ಲೆಟರ್ ಆಫ್ ಕ್ರೆಡಿಟ್’ (ಎಲ್‌ಸಿ) ಪಡೆದಿರುವ ದೇಶಗಳಿಗೆ ಮಾತ್ರ ರಫ್ತು ಮಾಡುವುದಕ್ಕೆ ಅವಕಾಶ ಕಲ್ಪಿಸಿದೆ. ಆ ಬಳಿಕವೂ 4.69 ಲಕ್ಷ ಟನ್ ಗೋಧಿಯ ರಫ್ತಿಗೆ ಭಾರತ ಅವಕಾಶ ಕಲ್ಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT