ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳನತ್ತ ಮಂಗಳವಾರ ಯುಎಇ ಉಪಗ್ರಹ ತಲುಪುವ ನಿರೀಕ್ಷೆ

Last Updated 7 ಫೆಬ್ರುವರಿ 2021, 14:17 IST
ಅಕ್ಷರ ಗಾತ್ರ

ದುಬೈ: ಸಂಯುಕ್ತ ಅರಬ್‍ ಸಂಸ್ಥಾನದ (ಯುಎಇ) ಮೊದಲ ಉಪಗ್ರಹ 'ಅಲ್ ಅಮಲ್‍' (ಹೋಪ್‍) ಅನ್ನು ಹೊತ್ತ ಗಗನನೌಕೆ ಮಂಗಳವಾರ ಮಂಗಳ ಗ್ರಹ ತಲುಪುವ ನಿರೀಕ್ಷೆಯಿದೆ.

ನಿಗದಿಯಂತೆ ಇದು ಕಕ್ಷೆ ತಲುಪಿದರೆ, ಈ ತಿಂಗಳು ಮಂಗಳಗ್ರಹದೆಡೆ ಆಗಮಿಸುತ್ತಿರುವ ಮೂರು ಬಾಹ್ಯಾಕಾಶ ನೌಕೆಗಳಲ್ಲಿ ಇದು ಮೊದಲನೆಯದಾಗಲಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್, ಚೀನಾ ಮತ್ತು ಅಮೆರಿಕ ಕಳೆದ ಜುಲೈನಲ್ಲಿ ಮಂಗಳನತ್ತ ಉಪಗ್ರಹಗಳನ್ನು ರವಾನಿಸಿವೆ. ಕೆಲವೇದಿನಗಳಲ್ಲಿಇವುಕೂಡಮಂಗಳನಅಂಗಳಪ್ರವೇಶಿಸುವಸಾಧ್ಯತೆಇದೆ. ಮಂಗಳದ ಬಗ್ಗೆ ಮಹತ್ವದ ಅಧ್ಯಯನ ನಡೆಸಲು ಈ ಅವಧಿಯನ್ನು ಬಳಸಿಕೊಳ್ಳುವ ತವಕದಲ್ಲಿ ಯುಎಇ ಇದೆ.

ಉಪಗ್ರಹ ನಿಗದಿಯಂತೆ ಕಕ್ಷೆಯನ್ನು ಸೇರಿದರೆ, ಶ್ರೀಮಂತ ಕೊಲ್ಲಿ ರಾಷ್ಟ್ರ ಮಂಗಳ ಗ್ರಹವನ್ನು ತಲುಪಿದ ಐದನೇ ರಾಷ್ಟ್ರವಾಗಲಿದೆ. 2021ಕ್ಕೆ ಯುಎಇ ಸ್ಥಾಪನೆಯಾಗಿ 50 ವರ್ಷ ತುಂಬಲಿದೆ.

‘ಕೆಂಪುಗ್ರಹ’ಎನಿಸಿರುವಮಂಗಳನನ್ನುತಲುಪಿದಸಾಧನೆಯಸಂಕೇತವಾಗಿಯುಎಇಯಲ್ಲಿರುವ ಪ್ರಮುಖ ಸ್ಥಳಗಳಲ್ಲಿರಾತ್ರಿವೇಳೆಕೆಂಪುದೀಪಗಳಿಂದಅಲಂಕರಿಸಲಾಗಿದೆ. ಸರ್ಕಾರದ ಸಾಮಾಜಿಕ ಜಾಲತಾಣಗಳಲ್ಲಿ #arabstMars ಹ್ಯಾಶ್‌ಟ್ಯಾಗ್‌ ಬಳಸಲಾಗುತ್ತಿದೆ. ವಿಶ್ವದ ಅತ್ಯಂತ ಎತ್ತರದ ಕಟ್ಟಡ ದುಬೈನ ಬುರ್ಜ್‌ ಖಲೀಫಾದಲ್ಲಿ ಸಂಭ್ರಮಾಚರಣೆಗೆ ಸಕಲ ತಯಾರಿ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT