ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌– ಐರೋಪ್ಯ ಒಕ್ಕೂಟದಿಂದ ಮುಕ್ತ ವ್ಯಾಪಾರ ಒಪ್ಪಂದ

Last Updated 25 ಡಿಸೆಂಬರ್ 2020, 2:03 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ ಹಾಗೂ ಐರೋಪ ಒಕ್ಕೂಟದ (ಇಯು) ನಡುವೆ ಮುಕ್ತ ವ್ಯಾಪಾರ ಒಪ್ಪಂದವು (ಎಫ್‌ಟಿಎ)ಗುರುವಾರ ಪೂರ್ಣಗೊಂಡಿದೆ.

ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬಂದ ಬಳಿಕ ಮಹತ್ವದ ಬೆಳವಣಿಗೆ ಇದಾಗಿದೆ. ಕಳೆದ ಜನವರಿ 31ಕ್ಕೆ ಬ್ರಿಟನ್‌ ಒಕ್ಕೂಟದಿಂದ ಹೊರಬಂದಿತ್ತು. ಬಳಿಕೆ ಎಫ್‌ಟಿಎಗೆ ಡಿ.31ರ ಗಡುವು ಹಾಕಿಕೊಳ್ಳಲಾಗಿತ್ತು. ಗಡುವಿನ ಮೊದಲೇ ಇದು ಸಾಕಾರಗೊಂಡಿದೆ. ಎರಡೂ ಸಂಸತ್ತುಗಳು ಇದಕ್ಕೆ ಅನುಮೋದನೆ ನೀಡಬೇಕಿವೆ.

‘ಬ್ರೆಕ್ಸಿಟ್‌ ಅನ್ನು ನಾವು ಪೂರ್ಣಗೊಳಿಸಿದ್ದೇವೆ. ಇದೀಗ ಸ್ವತಂತ್ರ ವಾಣಿಜ್ಯ ರಾಷ್ಟ್ರವಾಗಿ, ವಿಶ್ವದೆಲ್ಲೆಡೆ ಇರುವ ಇತರೆ ಪಾಲುದಾರರ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಅತ್ಯುತ್ಕೃಷ್ಟವಾದ ಅವಕಾಶಗಳನ್ನು ನಾವು ಸದ್ಬಳಕೆ ಮಾಡಿಕೊಳ್ಳುವ ಸಂದರ್ಭ ಬಂದಿದೆ’ ಎಂದು ಬ್ರಿಟನ್‌ ಪ್ರಧಾನಿ ಕಚೇರಿಯು ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

‘ಬ್ರಿಟನ್‌ ಈಗ ತನ್ನ ಹಣ,ಗಡಿ, ಕಾನೂನು, ವಾಣಿಜ್ಯ ಹಾಗೂ ಅಧಿಕಾರವನ್ನು ಹಿಂಪಡೆದಿದ್ದು, ಒಪ್ಪಂದವು ಐರೋಪ್ಯ ಒಕ್ಕೂಟದ ಹಿಡಿತದಲ್ಲಿ ನಾವಿಲ್ಲ ಎನ್ನುವ ಭರವಸೆಯನ್ನೂ ನೀಡಿದೆ. ಈ ಒಪ್ಪಂದವು ಅತಿದೊಡ್ಡ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದವಾಗಿದೆ. 2021 ಜನವರಿ 1ರಿಂದ ಬ್ರಿಟನ್‌ ಪೂರ್ಣ ಪ್ರಮಾಣದಲ್ಲಿ ರಾಜಕೀಯ ಹಾಗೂ ಆರ್ಥಿಕ ಸ್ವಾತಂತ್ರ್ಯವನ್ನು ಹೊಂದಿರಲಿದೆ’ ಎಂದು ಪ್ರಧಾನಿ ಕಚೇರಿಯು ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT